ಮನೆ ರಾಜ್ಯ ಲಾಲ್‌ ಬಾಗ್‌ ನಲ್ಲಿ ಫ್ಲವರ್‌ ಶೋ ನೋಡಲು ಬರುವವರಿಗೆ ಮೆಟ್ರೋದಿಂದ ವಿಶೇಷ ಟಿಕೆಟ್‌ ಬಿಡುಗಡೆ

ಲಾಲ್‌ ಬಾಗ್‌ ನಲ್ಲಿ ಫ್ಲವರ್‌ ಶೋ ನೋಡಲು ಬರುವವರಿಗೆ ಮೆಟ್ರೋದಿಂದ ವಿಶೇಷ ಟಿಕೆಟ್‌ ಬಿಡುಗಡೆ

0

ಬೆಂಗಳೂರು (Bengaluru): 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಲಾಲ್‌ ಬಾಗ್‌ ನಲ್ಲಿ ಫಲಪುಪ್ಪ ಪ್ರದರ್ಶನ ಆಯೋಜಿಸಲಾಗಿದೆ. ಫಲಪುಪ್ಪ ಪ್ರದರ್ಶನಕ್ಕೆ ಭೇಟಿ ನೀಡುವವರಿಗೆ ನಮ್ಮ ಮೆಟ್ರೋ ವಿಶೇಷ ಟಿಕೆಟ್‌ ಬಿಡುಗಡೆ ಮಾಡಿದೆ.

ಲಾಲ್ ಬಾಗ್ ನಿಂದ ನಗರದ ಯಾವುದೇ ಮೆಟ್ರೋ ಸ್ಟೇಷನ್ ಗೆ ಪ್ರಯಾಣಿಸಲು 30 ರೂಪಾಯಿಗಳ ವಿಶೇಷ ಟಿಕೆಟ್ ಬಿಡುಗಡೆ ಮಾಡಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಆಗಸ್ಟ್ 13 ರಿಂದ ಆಗಸ್ಟ್ 15 ರವರೆಗೆ ನಮ್ಮ ಮೆಟ್ರೋದಲ್ಲಿ ರಿಟರ್ನ್ ಜರ್ನಿಗಾಗಿ 30 ರೂಪಾಯಿಗೆ ಪೇಪರ್ ಟಿಕೆಟ್ ಗಳನ್ನು ನೀಡಲಾಗುತ್ತಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಮೂರು ದಿನಗಳ ಕಾಲ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಲಾಲ್ ಬಾಗ್ ಮೆಟ್ರೋ ನಿಲ್ದಾಣದಿಂದ ಇತರೆ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಟಿಕೆಟ್ ದರವನ್ನು 30 ರೂಪಾಯಿ ನಿಗದಿಪಡಿಸಲಾಗಿದೆ. ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಈ ಟಿಕೆಟ್ ಖರೀದಿಸಬಹುದು.