ಮನೆ ಸುದ್ದಿ ಜಾಲ ಸೌಲಭ್ಯಗಳನ್ನು ಪಡೆಯಲು ಸಮುದಾಯಗಳು ಒಗ್ಗಟ್ಟಿನಿಂದ ಇರಬೇಕು: ಶಾಸಕ ಎಲ್.ನಾಗೇಂದ್ರ

ಸೌಲಭ್ಯಗಳನ್ನು ಪಡೆಯಲು ಸಮುದಾಯಗಳು ಒಗ್ಗಟ್ಟಿನಿಂದ ಇರಬೇಕು: ಶಾಸಕ ಎಲ್.ನಾಗೇಂದ್ರ

0

ಮೈಸೂರು (Mysuru): ಸೌಲಭ್ಯಗಳನ್ನು ಪಡೆಯಲು ಸಮುದಾಯಗಳು ಒಗ್ಗಟ್ಟಿನಿಂದ ಇರಬೇಕು ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಲ್. ನಾಗೇಂದ್ರ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ನುಲಿಯ ಚಂದಯ್ಯ ಜಯಂತೋತ್ಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಕಲಾಮಂದಿರದಲ್ಲಿ ಆಯೋಜಿಸಿದ್ದ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಲವು ವರ್ಷಗಳ ನಂತರವೂ ಸಹ ಇವರನ್ನು ನೆನಪು ಮಾಡಿಕೊಂಡು ಕಾರ್ಯಕ್ರಮವನ್ನು ಆಚರಣೆ ಮಾಡುತ್ತಿದ್ದೇವೆ ಎಂದರೆ ಅವರು ಮಾಡಿರುವ ಕಾಯಕ ಕಾರಣ. ಅವರು ಹುಲ್ಲಿನಲ್ಲಿ ಹಗ್ಗವನ್ನು ನೈದು ಮಾರಾಟ ಮಾಡುವಂತಹ ವೃತ್ತಿ ಮಾಡುತ್ತಿದ್ದರು. ತಿಳಿಸಿದರು. ಸಮಾಜಕ್ಕೆ ಒಳ್ಳೆಯದಾಗುವಂತಹ ಹಲವಾರು ವಿಚಾರಗಳನ್ನು ನುಲಿಯ ಚಂದಯ್ಯ ಅವರು ಕೊಡುಗೆಯಾಗಿ ನೀಡಿದ್ದಾರೆ. ಇವರು ಒಬ್ಬ ಶ್ರೇಷ್ಠ ಶರಣರು. ಒಟ್ಟು ಇವರ 48 ವಚನಗಳು ಲಭ್ಯವಾಗಿವೆ ಎಂದು ತಿಳಿಸಿದರು.

ನಿವೃತ ಜಿಲ್ಲಾಧಿಕಾರಿಗಳಾದ ಅಂಜನ್ ಕುಮಾರ್ ಅವರು ಮಾತನಾಡಿ, ಪರಿಶಿಷ್ಟ ಜಾತಿಗೆ ಸೇರಿದ ಅತ್ಯಂತ ಹಿಂದುಳಿದ ಜನಾಂಗದಲ್ಲಿ ಒಂದಾಗಿರುವ ಕೊರವಂಜಿ, ಭಜಂತ್ರಿ ಎಂಬ ವಿವಿಧ ಹೆಸರುಗಳಿಂದ ಕರ್ನಾಟಕದಾದ್ಯಂತ ಹಂಚಿ ಹೋಗಿರುವ ಜನಾಂಗ ಅಂದರೆ ಕೊರಮ ಕೊರಚ ಜನಾಂಗ. ಕುಳಿರ್ ಭಾಷೆ ಮಾತನಾಡುವಂತಹ ಜನಾಂಗದವರನ್ನು ಕೊರಚ ಎಂದು ಕರೆಯುತ್ತಾರೆ. ನಾಯಕತ್ವದ ಕೊರತೆ, ಸಂಘಟನೆ ಕೊರತೆ ಇರುವುದರಿಂದ ಜನಾಂಗದವರು ಸೌಲಭ್ಯವನ್ನು ಬಳಸಿಕೊಳ್ಳಲು ಆಗುತ್ತಿಲ್ಲ. ಜಾಗೃತಿ ಎನ್ನುವುದು ನಮ್ಮ ಸಮಾಜಕ್ಕೆ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

ನುಲಿಯ ಚಂದಯ್ಯನವರು ಕಾಯಕ ಮುಂದೆ ಇಟ್ಟುಕೊಂಡು ಕಾಯಕವೇ ಜೀವನ ಮುಕ್ತಿ ಎಂಬ ತತ್ವವನ್ನು ಸಾರಿ ಹೇಳಿದರು ಇವರು ಬಿಜಾಪುರ ಜಿಲ್ಲೆಯ ಶಿವನೇ ಗ್ರಾಮದಲ್ಲಿ ಜನಿಸಿದರು. ಇವರು ಒಬ್ಬ ಕಾಯಕಯೋಗಿ. ಶಿವಣಿಯ ಗ್ರಾಮಸ್ಥರೆಲ್ಲರೂ ಕೂಡ ಇವರ ಭಕ್ತರಾಗಿದ್ದರು ಗುರು-ಲಿಂಗ-ಜಂಗಮ ಸೇವೆ ಬಹಳ ಮುಖ್ಯ ಜೀವನದಲ್ಲಿ ಎಂದು ಇವರು ತಿಳಿಸಿದ್ದರು. ಕಾಯಕವು ಸ್ವಾವಲಂಬನೆಗೆ ಮುಖ್ಯ ದಾರಿಯೆಂದು ಇವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್‌ನ ಸದಸ್ಯರಾದ ವಿಶ್ವನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ.ಸುದರ್ಶನ್ ಸೇರಿದಂತೆ ಮುಖಂಡರಾದ ಕೃಷ್ಣಶೆಟ್ಟಿ, ಶಿವಶಂಕರ್, ಬಲರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.