ಮನೆ ರಾಜ್ಯ ರಾಜ್ಯದ 18 ಪೊಲೀಸರಿಗೆ ರಾಷ್ಟ್ರಪತಿ ಪದಕ

ರಾಜ್ಯದ 18 ಪೊಲೀಸರಿಗೆ ರಾಷ್ಟ್ರಪತಿ ಪದಕ

0

ಬೆಂಗಳೂರು (Bengaluru): ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ ಎಸ್ಪಿಗಳು, ಡಿವೈಎಸ್ಪಿಗಳು ಸೇರಿದಂತೆ 18 ಪೊಲೀಸರಿಗೆ 2022ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಪದಕ ಪ್ರದಾನ ಕಾರ್ಯಕ್ರಮ ಜರುಗಲಿದೆ.

ಪದಕ ಪಡೆದವರ ವಿವರ:

ಕಡೂರಿನ ಪೊಲೀಸ್ ತರಬೇತಿ ಶಾಲೆಯ ಎಸ್ಪಿ ಎನ್‌. ಶ್ರೀನಿವಾಸ್, ಬಂಟ್ವಾಳದ ಆಂತರಿಕ ಭದ್ರತಾ ವಿಭಾಗದ ಡಿವೈಎಸ್ಪಿ ಪ್ರತಾಪ್ ಸಿಂಗ್ ತೋರಟ್, ಹೈಕೋರ್ಟ್ ಭದ್ರತೆ ಡಿವೈಎಸ್ಪಿ ಟಿ.ಎಂ.ಶಿವಕುಮಾರ್, ಕಲಬುರಗಿಯ ಡಿಸಿಆರ್‌ಬಿ ಡಿವೈಎಸ್ಪಿ ಜೆ.ಎಚ್. ಇನಾಂದಾರ್, ಸಿಐಡಿ ಅರಣ್ಯ ವಿಭಾಗ ಡಿವೈಎಸ್ಪಿ ಎನ್‌.ಟಿ. ಶ್ರೀನಿವಾಸ್ ರೆಡ್ಡಿ, ಸಿಐಡಿ ಡಿವೈಎಸ್ಪಿ ಪಿ. ನರಸಿಂಹಮೂರ್ತಿ, ಬೆಂಗಳೂರಿನ ಎಫ್‌ಪಿಬಿ ಎಸಿಪಿ ರಾಘವೇಂದ್ರ ರಾವ್ ಶಿಂಧೆ, ಎಸಿಬಿ ಡಿವೈಎಸ್ಪಿ ಆರ್‌. ಪ್ರಕಾಶ್, ಧಾರವಾಡದ ನವಲಗುಂದದ ಸಿಪಿಐ ಧೃವರಾಜ್ ಬಿ. ಪಾಟೀಲ, ಬೆಂಗಳೂರಿನ ಎಸಿಬಿ ಇನ್‌ಸ್ಪೆಕ್ಟರ್ ಎಸ್. ಮೊಹಮ್ಮದ್ ಅಲಿ, ಮೈಸೂರಿನ ವಿದ್ಯಾರಣ್ಯಪುರಂನ ಇನ್‌ಸ್ಪೆಕ್ಟರ್ ಜಿ.ಸಿ. ರಾಜ, ಚಿಕ್ಕಮಗಳೂರಿನ ಶೃಂಗೇರಿಯ ಇನ್‌ಸ್ಪೆಕ್ಟರ್ ಬಿ.ಎಸ್. ರವಿ, ಬೆಂಗಳೂರಿನ ಕೆಎಸ್‌ಆರ್‌ಪಿ 4ನೇ ಪಡೆಯ ಆರ್‌ಪಿಐ ಮುಫೀದ್ ಖಾನ್, ಬೆಂಗಳೂರಿನ ಕೆಎಸ್‌ಆರ್‌ಪಿ 4ನೇ ಪಡೆ ಸಹಾಯಕ ಆರ್‌ಎಸ್‌ಐ ಮಹದೇವಯ್ಯ, ಬೆಂಗಳೂರಿನ ಕೆಎಸ್‌ಆರ್‌ಪಿ 3ನೇ ಪಡೆಯ ಸಹಾಯಕ ಆರ್‌ಎಸ್‌ಐ ಮುರುಳಿ, ಬೆಂಗಳೂರಿನ ಸಹಾಯಕ ಗುಪ್ತದಳ ಅಧಿಕಾರಿ ಬಸವರಾಜ ಅಂಡೆಮ್ಮನವರ, ಬೆಂಗಳೂರಿನ ಕೆಂಪೇಗೌಡ ನಗರದ ಎಎಸ್‌ಐ ರಂಜಿತ್ ಶೆಟ್ಟಿ, ಬೆಳಗಾವಿ ಡಿಎಸ್‌ಬಿ ಎಎಸ್‌ಐ ಬಾಲಕೃಷ್ಣ ಶಿಂಧೆ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.