ಮನೆ ಅಪರಾಧ ಹರ್ಷ ಕೊಲೆ ಪ್ರಕರಣ: 8 ಜನರ ಬಂಧನ, ಶುಕ್ರವಾರದವರೆಗೆ ನಿಷೇಧಾಜ್ಞೆ ಮುಂದುವರಿಕೆ

ಹರ್ಷ ಕೊಲೆ ಪ್ರಕರಣ: 8 ಜನರ ಬಂಧನ, ಶುಕ್ರವಾರದವರೆಗೆ ನಿಷೇಧಾಜ್ಞೆ ಮುಂದುವರಿಕೆ

0

ಬೆಂಗಳೂರುಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 8 ಜನರನ್ನು ಅಧಿಕೃತವಾಗಿ ಬಂದಿಸಲಾಗಿದ್ದು,  ಇನ್ನು ಕೆಲವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಬಂಧಿತ ಆರೋಪಿಗಳ ಹಿನ್ನೆಲೆಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದು, ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರೆತಿರುವುದಲ್ಲದೇ ಅವರ ಮೇಲೆ ಕೆಲವು ಕೇಸುಗಳಿದ್ದು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಶಿವಮೊಗ್ಗ ನಗರದಲ್ಲಿ ಶುಕ್ರವಾರದವರೆಗೆ 144 ಸೆಕ್ಷನ್ ನಿಷೇಧಾಜ್ಞೆ ಮುಂದುವರಿಸುತ್ತೇವೆ. ಅಲ್ಲಿ ಜಿಲ್ಲಾಧಿಕಾರಿಗಳು ಪರಿಸ್ಥಿತಿ ನೋಡಿಕೊಂಡು ನಿರ್ಣಯ ತೆಗೆದುಕೊಳ್ಳುತ್ತಾರೆ, ಹತ್ಯೆ ಘಟನೆಯಾದ ಬಳಿಕ ಉಂಟಾದ ಕಲ್ಲು ತೂರಾಟ, ಗಲಭೆಯಲ್ಲಿ ಆದ ಹಾನಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಹೇಳಿದರು.

ಪೊಲೀಸರ ತನಿಖೆಯಿಂದ ಆರೋಪಿಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊರಗೆ ಬರಬೇಕು. ಈ ಆರೋಪಿಗಳು ಯಾವ ಸಂಘಟನೆಗೆ ಸೇರಿದ್ದಾರೆ, ಅವರಿಗೆ ಏನು ಸಂಪರ್ಕವಿದೆ, ಎಲ್ಲಾ ಆಯಾಮಗಳಿಂದ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಶಿವಮೊಗ್ಗದ ಹರ್ಷ ಕೊಲೆ ಪ್ರಕರಣ ಸಾಮಾನ್ಯವಾದ ಕೊಲೆ ಪ್ರಕರಣ ಎಂದು ಭಾವಿಸದೆ ಗಂಭೀರವಾಗಿ ಪರಿಗಣಿಸಿ ಇದರ ಹಿಂದಿರುವ ಶಕ್ತಿಗಳನ್ನು ಪತ್ತೆಹಚ್ಚಿ ತನಿಖೆ ಮೂಲಕ ಹೊರಗೆ ತರಬೇಕು, ಇದರ ಹಿಂದೆ ಸಂಘಟನೆಗಳ ಕೈವಾಡದ ಸಾಧ್ಯತೆಯಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಅರುಣ್ ಅವರಿಗೆ ಕೊಲೆ ಬೆದರಿಕೆ ಬಂದಿರುವ ಬಗ್ಗೆ ಲಘುವಾಗಿ ತೆಗೆದುಕೊಳ್ಳದೆ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ. ಸಾಮಾನ್ಯ ಜನರಿಗೂ, ಪ್ರಮುಖ ವ್ಯಕ್ತಿಗಳಿಗೂ ಸರ್ಕಾರ ಭದ್ರತೆ ಒದಗಿಸುತ್ತದೆ ಎಂದರು.

ಬೇಜವಾಬ್ದಾರಿತನದಿಂದ ವರ್ತಿಸಿದ ಪೊಲೀಸರನ್ನು ಕೂಡ ಬಿಡುವುದಿಲ್ಲ. ಶಿವಮೊಗ್ಗ ಹಿಂದಿನಿಂದಲೂ ಕೂಡ ಕೊಲೆ, ಅಪರಾಧಕ್ಕೆ ಕುಖ್ಯಾತಿಯಾಗಿತ್ತು, ಬೆಂಗಳೂರು ರೌಡಿಗಳಿಗೆ ತವರು ಎಂದು ಬಿಂಬಿತವಾದಂತೆ ಶಿವಮೊಗ್ಗಕ್ಕೂ ಅಂತಹ ಕುಖ್ಯಾತ ಹೆಸರು ಇದೆ, ರೌಡಿಗಳನ್ನು ಹಾಗೆಯೇ ಬಿಟ್ಟರೆ ಬೇರೆ ಜಿಲ್ಲೆಗಳಿಗೂ ವ್ಯಾಪಿಸುತ್ತದೆ, ರೌಡಿಗಳು, ಕುಕೃತ್ಯದಲ್ಲಿ ಭಾಗಿಯಾಗುವವರಿಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಕಠಿಣ ಸಂದೇಶ ರವಾನೆ ಮಾಡುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಹಿಂದಿನ ಲೇಖನಉತ್ತರಪ್ರದೇಶ ಚುನಾವಣೆ: 4ನೇ ಹಂತದ ಮತದಾನ ಆರಂಭ
ಮುಂದಿನ ಲೇಖನಮತದಾನದ ಮೂಲಕ ಪ್ರಜಾಪ್ರಭುತ್ವ ಬಲಪಡಿಸಿ: ಪ್ರಧಾನಿ