ಮನೆ ಅಂತರಾಷ್ಟ್ರೀಯ ಪಾಕಿಸ್ತಾನ: ಬಸ್ – ತೈಲ ಟ್ಯಾಂಕರ್ ಡಿಕ್ಕಿ- 20 ಜನರು ಸಜೀವ ದಹನ

ಪಾಕಿಸ್ತಾನ: ಬಸ್ – ತೈಲ ಟ್ಯಾಂಕರ್ ಡಿಕ್ಕಿ- 20 ಜನರು ಸಜೀವ ದಹನ

0

ಲಾಹೋರ್(Lahore): ಬಸ್ ಹಾಗೂ ತೈಲ್ ಟ್ಯಾಂಕರ್ ನಡುವೆ ಭೀಕರ ಡಿಕ್ಕಿ ಸಂಭವಿಸಿದ ಪರಿಣಾಮ 20 ಮಂದಿ ಸಜೀವ ದಹನವಾಗಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.

ಲಾಹೋರ್‌ನಿಂದ 350 ಕಿಮೀ ದೂರ ಇರುವ ಮುಲ್ತಾನ್–ಸುಕ್ಕೂರ್ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ ಈ ದುರ್ಘಟನೆ ನಡೆದಿದೆ.

ಟ್ರಕ್‌ ಕರಾಚಿಯಿಂದ ಲಾಹೋರ್‌ಗೆ ತೆರಳುತಿತ್ತು. ಬಸ್‌ ಲಾಹೋರ್‌ನಿಂದ ಮುಲ್ತಾನ್ ನಗರಕ್ಕೆ ಹೊರಟಿತ್ತು.ಬಸ್‌ ಚಾಲಕನ ನಿರ್ಲಕ್ಷ್ಯ ಹಾಗೂ ಅತಿ ವೇಗವೇ ಈ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪರಿಹಾರ ಕಾರ್ಯಾಚರಣೆ ಕೈಗೊಂಡರು.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 20ಜನ ಸುಟ್ಟು ಕರಕಲಾಗಿದ್ದು, ಗುರುತು ಹಿಡಿಯಲು ಸಾಧ್ಯ ಆಗುತ್ತಿಲ್ಲ. ಡಿಎನ್‌ಎ ವರದಿ ನಂತರ ಶವಗಳನ್ನು ಕುಟುಂಬಗಳಿಗೆ ಹಸ್ತಾಂತರ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.