ಮೈಸೂರು(Mysuru): ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಹಾಗೂ ಕಲಾ ಕಾಲೇಜಿಗೆ ಶಾಸಕ ಎಲ್. ನಾಗೇಂದ್ರ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ರೈಟ್ಸ್ ಸಂಸ್ಥೆಯ ಇಂಜಿನಿಯರುಗಳೊಂದಿಗೆ ಹಾಗೂ ಕಾಲೇಜಿನ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರುಗಳೊಂದಿಗೆ ಕಾಲೇಜು ಕಟ್ಟಡಗಳನ್ನು ವೀಕ್ಷಿಸಿದರು.
ಬಳಿಕ ಅಗತ್ಯವಾದ ದುರಸ್ತಿ, ನವೀಕರಣ, ನಿರ್ಮಾಣ ಕಾಮಗಾರಿಗಳ ವಿವರಗಳನ್ನು ಪಡೆದು 15 ದಿವಸಗಳ ಒಳಗಾಗಿ ಸಮಗ್ರ ವಿವರಣಾ ಅಂದಾಜು ಪಟ್ಟಿ ತಯಾರಿಸುವಂತೆ ಸೂಚನೆ ನೀಡಿದರು.