ಮನೆ ಸುದ್ದಿ ಜಾಲ ನ್ಯಾಯ, ನೀತಿ, ಧರ್ಮ ಹಾದಿಯಲ್ಲಿ ನಡೆಯಲು ದಾರಿ ಮಾಡಿಕೊಟ್ಟಂತಹ ಪರಮಾತ್ಮ ಶ್ರೀ ಕೃಷ್ಣ: ಎಲ್.ನಾಗೇಂದ್ರ

ನ್ಯಾಯ, ನೀತಿ, ಧರ್ಮ ಹಾದಿಯಲ್ಲಿ ನಡೆಯಲು ದಾರಿ ಮಾಡಿಕೊಟ್ಟಂತಹ ಪರಮಾತ್ಮ ಶ್ರೀ ಕೃಷ್ಣ: ಎಲ್.ನಾಗೇಂದ್ರ

0

ಮೈಸೂರು (Mysuru): ಇಂದು ದೇಶ ಧರ್ಮದ ಹಾದಿಯಲ್ಲಿ ಸಾಗುತ್ತಿದೆ ನ್ಯಾಯ, ನೀತಿ, ಧರ್ಮ ಹಾದಿಯಲ್ಲಿ ನಡೆಯಲು ದಾರಿ ಮಾಡಿಕೊಟ್ಟಂತಹ ಶ್ರೀ ಕೃಷ್ಣ ಪರಮಾತ್ಮನ ಜನ್ಮದಿನಾಚರಣೆಯನ್ನು ನಾವು ಇಂದು ಆಚರಿಸುತ್ತಿದ್ದೇವೆ ಎಂದು ಚಾಮರಾಜ ಕ್ಷೇತ್ರದ ವಿಧಾನಸಭೆ ಶಾಸಕರಾದ ಎಲ್.ನಾಗೇಂದ್ರ ಅವರು ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಕೃಷ್ಣ ಜಯಂತೋತ್ಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಕೃಷ್ಣ ಹುಟ್ಟಿದ ಜನ್ಮದಿನವನ್ನು ಭಾರತಾದ್ಯಂತ ನಾವೆಲ್ಲರೂ ಆಚರಿಸುತ್ತಿರುವುದಲ್ಲದೆ. ಇಸ್ಕಾನ್ ಸಂಸ್ಥೆಗಳಿಂದ ಕೃಷ್ಣನ ಲೀಲೆಗಳನ್ನು ಹೆಚ್ಚಾಗಿ ಅಮೆರಿಕ ದೇಶದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅಮೆರಿಕ ದೇಶದಲ್ಲೂ ಹೆಚ್ಚು ಶ್ರೀಕೃಷ್ಣನ ಭಕ್ತರಿದ್ದು, ಅವರು ಸಹ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಿದ್ದಾರೆ ಎಂದು ಪ್ರಸ್ತಾಪಿಸಿದರು.
ಕೃಷ್ಣ ಹುಟ್ಟಿದ ದಿನವನ್ನು ನಾವು ಶ್ರೀ ಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಶ್ರೀಕೃಷ್ಣನ ಜನ್ಮದಿನವನ್ನು ಗೋಕುಲಾಷ್ಟಮಿ ದಿನವನ್ನಾಗಿ ಆಚರಿಸುತ್ತಿದ್ದೇವೆ. ಯಾದವ ಎಂಬ ಶ್ರೇಷ್ಠ ಕುಲದಲ್ಲಿ ಹುಟ್ಟಿ ಕಂಸನ ವಧೆಯನ್ನು ಮಾಡಲು ವಾಸುದೇವ ದೇವಕಿಯ ಎಂಟನೇ ಮಗನಾಗಿ ಜನಿಸಿದ ಕೃಷ್ಣನು, ಸಾಕು ತಾಯಿಯಾಗಿದ್ದ, ಯಶೋದೆ ಹಾಗೂ ನಂದ ಅವರ ಪ್ರೀತಿ ವಾತ್ಸಲ್ಯದಲ್ಲಿ ಬೆಳೆಯುತ್ತಾರೆ. ಮಹಾಭಾರತದಲ್ಲಿ ಕೌರವರು ಮತ್ತು ಪಾಂಡವರ ಧರ್ಮ ಯುದ್ಧದಲ್ಲಿ ಧರ್ಮದ ಪರವಾಗಿ ನಿಂತಿದ್ದ ಶ್ರೀ ಕೃಷ್ಣನು ಧರ್ಮ ಸಂರಕ್ಷಣೆಯನ್ನು ಮಾಡಿದವರು. ದ್ವಾಪರ ಯುಗ, ತೇತಾಯುಗದಲ್ಲಿ ರಾಮ, ಕೃಷ್ಣ ಇಬ್ಬರೂ ಒಂದೇ ಆಗಿರುತ್ತಾರೆ. ಧರ್ಮದ ಉಳಿವಿಗಾಗಿ ಅನ್ಯಾಯದ ವಿರುದ್ಧ ಹೋರಾಡಿದವರು ಇವರು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಣ್ಣ ಮತ್ತು ಅರಘು ಕಾರ್ಖಾನೆಯ ಅಧ್ಯಕ್ಷರಾದ ರಘು ಕೌಟಿಲ್ಯ ಅವರು ಮಾತನಾಡಿ, ಕೃಷ್ಣ ಮತ್ತು ಗೀತಾಸಾರ ಎರಡು ಭಾರತದ ಸಂಸ್ಕೃತಿಯ ಬಹುದೊಡ್ಡ ಹೆಗ್ಗಳಿಕೆ ಮತ್ತು ಗುರುತುಗಳು ಧರ್ಮದ ಉಳಿವಿಗಾಗಿ, ಮನುಕುಲದ ಉದ್ದಾರಕ್ಕಾಗಿ, ಭೂಮಿಯ ಉಳಿಯುವಿಗಾಗಿ, ಧರ್ಮದ ಪ್ರತಿಯೊಂದು ಘಟ್ಟದಲ್ಲಿ ನಿರೂಪಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ. ಶ್ರೇಷ್ಠ ಕೃತಿಗಳಲ್ಲಿ ಇರಬೇಕಾದಂತಹ ಅಂಶ ಭಗವದ್ಗೀತೆಯಲ್ಲಿ ಮೂಲಕ ಜಗತ್ತಿಗೆ ನಿರೂಪಿಸಿ ಕೊಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ ವಾಣಿ ವಿಲಾಸ ಅರಸು ಮಹಿಳಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಎನ್.ಅನ್ನಪೂರ್ಣ, ಮೈಸೂರು ಮಹಾನಗರ ಪಾಲಿಕೆಯ ಸದಸ್ಯರಾದ ಗೀತಾ ಯೋಗಾನಂದ, ಯಾದವ ಸಂಘದ ಅಧ್ಯಕ್ಷರಾದ ಜವರೇಗೌಡ, ಯಾದವ ಸಂಘದ ಪದಾಧಿಕಾರಿಯಾದ ಪುಷ್ಪವಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ.ಸುದರ್ಶನ್ ಅನೇಕರು ಉಪಸ್ಥಿತರಿದ್ದರು.