ಮನೆ ಅಪರಾಧ ಖಾಸಗಿ ಶಾಲೆ ಬಸ್- ಕ್ಯಾಂಟರ್ ಅಪಘಾತ: ಇಬ್ಬರು ಚಾಲಕರು ಸಾವು

ಖಾಸಗಿ ಶಾಲೆ ಬಸ್- ಕ್ಯಾಂಟರ್ ಅಪಘಾತ: ಇಬ್ಬರು ಚಾಲಕರು ಸಾವು

0

ಅಥಣಿ(ಬೆಳಗಾವಿ ಜಿಲ್ಲೆ): ಖಾಸಗಿ ಶಾಲೆ ಬಸ್ ಹಾಗೂ ಕ್ಯಾಂಟರ್ ಮಧ್ಯೆ ಅಪಘಾತ ಸಂಭವಸಿದ್ದು, ಇಬ್ಬರು ಚಾಲಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರವಲಯದ ಮೀರಜ್ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಅಪಘಾತದಲ್ಲಿ ಇಬ್ಬರೂ ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದು, 10ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಬಣಜವಾಡ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್ ಹಾಗೂ ಕ್ಯಾಂಟರ್ ಮಧ್ಯೆ ಅಪಘಾತ ಸಂಭವಿಸಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ‌. ಈ ಬಸ್‌ನಲ್ಲಿ 20 ಮಕ್ಕಳು ಸಂಚರಿಸುತ್ತಿದ್ದರು.

ಅಥಣಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.