ಮನೆ ಸುದ್ದಿ ಜಾಲ ಮಹಿಳೆಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕ್ರಿಕೆಟಿಗರ ಬಂಧನ

ಮಹಿಳೆಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕ್ರಿಕೆಟಿಗರ ಬಂಧನ

0

ಶ್ರೀಲಂಕಾದಲ್ಲಿ 19 ವರ್ಷದೊಳಗಿನ ಇಬ್ಬರು ಕ್ರಿಕೆಟಿಗರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಹೋಟೆಲ್ ಸ್ನಾನಗೃಹದಲ್ಲಿ ರಹಸ್ಯವಾಗಿ ಮೊಬೈಲ್ ಫೋನ್​ ನಲ್ಲಿ ​ ಮಹಿಳೆಯರ ಖಾಸಗಿ ವೀಡಿಯೊ ಚಿತ್ರಿಕರಣ ಮಾಡಿದ ಆರೋಪದ ಮೇಲೆ ಅವರನ್ನು ಬಂಧನ ಮಾಡಲಾಗಿದೆ ಎನ್ನಲಾಗಿದೆ.

 ಶ್ರೀಲಂಕಾದ 19 ವರ್ಷದೊಳಗಿನ ಕ್ರಿಕೆಟ್ ತಂಡ ತಂಗಿದ್ದ ಕೊಲಂಬೊದ ನರಹೇನ್‌ಪಿಟಾ ಪ್ರದೇಶದ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಆದಾಗ್ಯೂ, ಆಟಗಾರರ ಹೆಸರುಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಕಳೆದ ವಾರ, ಈ ಇಬ್ಬರು ಯುವ ಕ್ರಿಕೆಟಿಗರು ತಾವು ಉಳಿದುಕೊಂಡಿದ್ದ  ಹೋಟೆಲ್‌ನಲ್ಲಿ ಮಹಿಳೆಯರ ಸ್ನಾನಗೃಹದಲ್ಲಿ ರಹಸ್ಯವಾಗಿ ಮೊಬೈಲ್​ ಮೂಲಕ ವೀಡಿಯೊ ಚಿತ್ರೀಕರಣ ಮಾಡಿದ್ದಾರೆ ಎಂದು ಮಹಿಳೆಯರು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಾತ್ರೂಮ್ ಒಳಗೆ ಇರುವಾಗ ತಮ್ಮ ವೀಡಿಯೊಗಳನ್ನು ಚಿತ್ರೀಕರಿಸಲಾಗಿದೆ ಎಂದು ನೊಂದ ಮಹಿಳೆಯರು ಹೇಳಿದ್ದಾರೆ. ಕೂಡಲೇ ತನಿಖೆ ನಡೆಸಿದ ಪೊಲೀಸರು ಈ ಆಟಗಾರರು ಬಂಧಿಸಿದ್ದಾರೆ ಎನ್ನಲಾಗಿದೆ . ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಹಿಂದಿನ ಮಧ್ಯಂತರ ಸಮಿತಿಯನ್ನು ವಿಸರ್ಜಿಸಿ ಹೊಸ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ಕೇವಲ 48 ಗಂಟೆಗಳ ಒಳಗೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ

ಪೊಲೀಸರ ಪ್ರಕಾರ, ಇಬ್ಬರು ಯುವ ಕ್ರಿಕೆಟಿಗರು ತಂಡದೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದರು. ಕೊಲಂಬೊದಲ್ಲಿ ಇದೇ ಹೋಟೆಲ್​ನಲ್ಲಿ ತಂಗಿದ್ದ ಇತರೇ ಮಹಿಳೆಯರು ಕಾಮನ್​ ಸ್ನಾನಗೃಹಗಳನ್ನು ಬಳಕೆ ಮಾಡುತ್ತಿರುವಾಗ ರಹಸ್ಯವಾಗಿ ಮೊಬೈಲ್ ಫೋನ್‌ಗಳಲ್ಲಿ ತಮ್ಮ ವಿಡಿಯೋಗಳನ್ನು ಚಿತ್ರೀಕರಿಸಲಾಗುತ್ತಿದೆ ಎಂದು ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ನಂತರ, ನರಹೇನ್‌ಪಿಟಾ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಇಬ್ಬರೂ ಆಟಗಾರರನ್ನು ಬಂಧಿಸಿದ್ದಾರೆ. ಅಲ್ಲದೇ ವಿಡಿಯೊಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾಗಿ ತಿಳಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ಪೊಲೀಸರು ಇಬ್ಬರನ್ನೂ ಬಂಧಿದಿ ಅಲುತ್ಕಡೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಅಲ್ಲಿ ತಲಾ 5,00,000 ಶ್ರೀಲಂಕಾ ರೂಪಾಯಿ (ಸುಮಾರು 1,564 ಅಮೆರಿಕನ್ ಡಾಲರ್) ವೈಯಕ್ತಿಕ ಬಾಂಡ್​ ​ಮೇಲೆ ಇಬ್ಬರಿಗೆ ಜಾಮೀನು ನೀಡಲಾಗಿದೆ. ಅಲ್ಲದೇ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 25ಕ್ಕೆ ಮುಂದೂಡಲಾಗಿದೆ. ಆದಾಗ್ಯೂ, ಶ್ರೀಲಂಕಾ ಕ್ರಿಕೆಟ್ ಮಂಡಳಿ ಇಬ್ಬರು ಆಟಗಾರರ ವಿರುದ್ಧ ಯಾವುದೇ ಕ್ರಮದ ಬಗ್ಗೆ ಇನ್ನೂ ಘೋಷಣೆ ಮಾಡಿಲ್ಲ ಎಂಬ ವಿಯ ತಿಳಿದು ಬಂದಿದೆ.

ಶ್ರೀಲಂಕಾದ ಕ್ರಿಕೆಟ್ ಮಂಡಳಿಯು ಪ್ರಸ್ತುತ ಆಡಳಿತಾತ್ಮಕ ಬದಲಾವಣೆಗಳಿಗೆ ಒಳಗಾಗುತ್ತಿದ್ದು, ಹಿಂದಿನ ಅಧಿಕಾರಿಗಳನ್ನು ತೆಗೆದುಹಾಕಿ ಪರಿವರ್ತನಾ ಸಮಿತಿಯನ್ನು ರಚಿಸಲಾಗುತ್ತಿದೆ. ಮಾಜಿ ಸಂಸದ ಆರನ್ ವಿಕ್ರಮರತ್ನೆ ಅವರನ್ನು ಈ ಪರಿವರ್ತನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕುಮಾರ್ ಸಂಗಕ್ಕಾರ ಅವರನ್ನು ಈ ಸಮಿತಿಯಲ್ಲಿ ಸೇರಿಸಲಾಗಿದೆ. ರೋಷನ್ ಮಹಾನಾಮ ಮತ್ತು ಸಿದ್ದತ್ ವೆಟ್ಟಿಮುನಿ ಕೂಡ ಈ ಸಮಿತಿಯ ಭಾಗವಾಗಿದ್ದಾರೆ. ಇದರ ಪರಿಣಾಮವಾಗಿ, ಈ ಪರಿವರ್ತನಾ ಸಮಿತಿಯು ಮುಂದಿನ ದಿನಗಳಲ್ಲಿ ಈ ಇಬ್ಬರು ಆಟಗಾರರ ವಿರುದ್ಧ ಮಹತ್ವದ ಕ್ರಮ ತೆಗೆದುಕೊಳ್ಳಬಹುದು ಎಂದು ವರದಿಗಳಿಂದ ತಿಳಿದು ಬಂದಿದೆ ಎನ್ನಲಾಗಿದೆ.