ಮನೆ ದಾಂಪತ್ಯ ಸುಧಾರಣೆ ಪತಿಯನ್ನು ಖುಷಿಪಡಿಸುವ ಈ ಗುಟ್ಟನ್ನು ಪತ್ನಿ ಕಲಿಯಲೇ ಬೇಕು

ಪತಿಯನ್ನು ಖುಷಿಪಡಿಸುವ ಈ ಗುಟ್ಟನ್ನು ಪತ್ನಿ ಕಲಿಯಲೇ ಬೇಕು

0

ಪತಿ-ಪತ್ನಿ ಇಬ್ಬರೂ ಪರಸ್ಪರ ಚೆನ್ನಾಗಿ ನೋಡಿಕೊಂಡರೆ ತಾನೇ ಇಬ್ಬರೂ ಖುಷಿಯಿಂದ ಇರಲು ಸಾಧ್ಯ. ಪತ್ನಿಯರು ತಮ್ಮ ಪತಿಯನ್ನು ಖುಷಿಪಡಿಸಲು ಈ ಸಣ್ಣ ಸಣ್ಣ ವಿಷ್ಯಗಳೇ ಸಾಕು.

ವೈವಾಹಿಕ ಜೀವನ ಸಂತೋಷವಾಗಿರಬೇಕಾದರೆ ಸಂಬಂಧದಲ್ಲಿ ಸಕಾರಾತ್ಮಕ ಮನೋಭಾವ ಮತ್ತು ಮೆಚ್ಚುಗೆಯ ಮಾತುಗಳು ಬಹಳ ಮುಖ್ಯ. ಗಂಡ ಮತ್ತು ಹೆಂಡತಿಯ ನಡುವೆ ಪ್ರೀತಿ ಮತ್ತು ಮೆಚ್ಚುಗೆಯ ಭಾವನೆಯನ್ನು ಪರಸ್ಪರ ನೀಡುತ್ತಲೇ ಇರಬೇಕು. ಆಗ ಮಾತ್ರ ಪತಿ ಪತ್ನಿಯರ ಸಂಬಂಧ ಇನ್ನೂ ಹೊಸ ಪ್ರೇಮಿಗಳಂತೆಯೇ ಇರುತ್ತದೆ. ನಿಮ್ಮ ಸಂಗಾತಿಗೆ ಸ್ಪೆಶಲ್ ಆಗಿಸಲು ನೀವು ಕೆಲವು ವಿಶೇಷ ಕೆಲಸಗಳನ್ನು ಮಾಡಬೇಕು. ಆ ಮೂಲಕ ಅವರು ನಿಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ನೀವು ಅವರಿಗೆ ತಿಳಿಯಪಡಿಸಬೇಕು.

ಹೀಗೆ ಮಾಡುವುದರಿಂದ ಇಬ್ಬರ ಸಂಬಂಧಗಳು ಗಟ್ಟಿಯಾಗಿರುತ್ತವೆ. ಪತ್ನಿಯರು ತಮ್ಮ ಪ್ರೀತಿಯ ಗಂಡನ ಮೇಲಿನ ಪ್ರೀತಿಯನ್ನು ಹೇಗೆ ಸುಲಭವಾಗಿ ವ್ಯಕ್ತಪಡಿಸಬಹುದು ಎನ್ನುವುದನ್ನು ನಾವಿಲ್ಲಿ ನೋಡೋಣ.

ಸಣ್ಣ ಪುಟ್ಟ ವಿಷ್ಯಗಳಕಡೆಗೆ ಗಮನಕೊಡಿ

ಪ್ರತಿಯೊಬ್ಬರ ಜೀವನದಲ್ಲೂ ಸಣ್ಣ ವಿಷಯಗಳೇ ಮುಂದೆ ದೊಡ್ಡದಾಗುವುದು. ಹಾಗಾಗಿ ನೀವು ನಿಮ್ಮ ಪತಿಯ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಇದರಿಂದ ಅವರಿಗೆ ಸಂತೋಷವಾಗುತ್ತದೆ. ನೀವು ಅವರ ಬಗ್ಗೆ ಕಾಳಜಿ ವಹಿಸುತ್ತಿದ್ದೀರಿ ಎನ್ನುವ ಭಾವನೆ ಮೂಡುತ್ತದೆ. ಅವರು ಅದನ್ನು ಪ್ರಶಂಸಿಸುವುದಲ್ಲದೆ, ನಿಮ್ಮ ಮೇಲೆ ಇನ್ನಷ್ಟು ಪ್ರೀತಿಯನ್ನು ಸುರಿಸುತ್ತಾರೆ. ನಿಮ್ಮ ಗಂಡನ ಇಷ್ಟ-ಕಷ್ಟಗಳನ್ನು ಯಾವಾಗಲೂ ನೋಡಿಕೊಳ್ಳಿ, ಇದರಿಂದ ನಿಮ್ಮ ಬಗ್ಗೆ ಅವರ ಮನಸ್ಥಿತಿ ಎಂದಿಗೂ ಬದಲಾಗುವುದಿಲ್ಲ. ಒಳ್ಳೆಯ ಭಾವನೆ ಇರುತ್ತದೆ.

ಲವ್‌ ಯು ಹೇಳಲು ಕಾಯಬೇಡಿ

ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಲು ಯಾವುದೇ ವಿಶೇಷ ದಿನದ ಅಗತ್ಯವಿರುವುದಿಲ್ಲ. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು, ಪ್ರೀತಿಯ ಮೂರು ಪದಗಳನ್ನು ಹೇಳುವ ಮೂಲಕ ನಿಮ್ಮ ಪತಿಗೆ ವಿಶೇಷ ಭಾವನೆ ಮೂಡಿಸಬಹುದು. ಅವರು ಯಾವುದೋ ವಿಷಯದ ಬಗ್ಗೆ ಅಸಮಾಧಾನಗೊಂಡಾಗ ಅಥವಾ ಕೋಪಗೊಂಡಾಗ ಮಾತ್ರ ಅವರ ಮೇಲೆ ಪ್ರೀತಿ ತೋರಿಸುವುದಲ್ಲ, ಬದಲಿಗೆ ಪ್ರತಿದಿನ ಅವರಿಗೆ ಐ ಲವ್‌ ಯೂ ಹೇಳಿ.

ಈ ಮೂರು ವಿಶೇಷ ಪದಗಳು ಅವರ ಮೇಲೆ ಆಳವಾದ ಪ್ರಭಾವ ಬೀರುತ್ತವೆ. ಅಲ್ಲದೆ ರೋಮ್ಯಾಂಟಿಕ್ ಫೀಲ್ ಆಗುತ್ತದೆ. ಬರೀ ಲವರ್‌ಗಳು ಮಾತ್ರವಲ್ಲ ಪತಿ ಪತ್ನಿಯರೂ ಐ ಲವ್‌ ಯು ಹೇಳುವುದರಿಂದ ಇಬ್ಬರ ನಡುವೆ ಪ್ರೀತಿ ಇನ್ನಷ್ಟು ಹೆಚ್ಚುತ್ತದೆ.

ಅವರತ್ತ ಗಮನ ಕೊಡಲು ಮರೆಯದಿರಿ

ಅನೇಕ ಬಾರಿ ಪತಿ ಕೆಲಸದ ಕಾರಣದಿಂದ ನಿಮತ್ತ ಗಮನ ಕೊಡಲು ಮರೆತುಬಿಡುತ್ತಾರೆ. ನಿಮ್ಮ ಜೊತೆ ಹೆಚ್ಚಿನ ಸಮಯವನ್ನು ಕಳೆಯಲು ಸಾಧ್ಯವಾಗುವುದಿಲ್ಲ ಅಥವಾ ನೀವು ಸಹ ಅದರ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಆದರೆ ಕೆಲವೊಮ್ಮೆ ಅವರು ತಮ್ಮ ಪತ್ನಿಯೊಂದಿಗೆ ದಿನವಿಡೀ ಇರುತ್ತಾರೆ. ಅಂತಹ ಸಂದರ್ಭದಲ್ಲಿ ಅವರ ನೆಚ್ಚಿನ ಆಹಾರವನ್ನು ಬೇಯಿಸಿ ಅಥವಾ ಅವರ ನೆಚ್ಚಿನ ರೆಸ್ಟೋರೆಂಟ್‌ಗೆ ಕರೆದೊಯ್ಯಿರಿ. ನಿಮ್ಮ ಕಾಳಜಿಯು ನಿಮ್ಮ ಪತಿಗೆ ನಿಮ್ಮ ಮೇಲೆ ವಿಶೇಷ ಭಾವನೆಯನ್ನುಂಟುಮಾಡುತ್ತದೆ. ಅವರಿಗೂ ನಿಮ್ಮನ್ನು ಹೊರಗಡೆ ಸುತ್ತಾಡಿಸಬೇಕು. ನಿಮ್ಮೊಂದಿಗೆ ಸಮಯ ಕಳೆಯಬೇಕೆಂದು ಇರುತ್ತದೆ.

ಹೊಗಳುವುದು

ನಿಮ್ಮ ಗಂಡನ ಹೃದಯವನ್ನು ಪ್ರೀತಿಯ ಮಾತುಗಳಿಂದ ತುಂಬಿಸಿ . ನಿಮ್ಮ ಪತಿ ನಿಮ್ಮಿಂದ ಸುಂದರವಾದ ವಿಷಯಗಳನ್ನು ಕೇಳಲು ಇಷ್ಟಪಡುತ್ತಾರೆ. ಅದೇ ಸಮಯದಲ್ಲಿ, ನೀವು ಅವರಿಗೆ ಹೇಳುವ ವಿಷಯಗಳು ಬಹಳಷ್ಟು ಅರ್ಥವನ್ನು ನೀಡುತ್ತದೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಮುಂದೆ ಅವರನ್ನು ಹೊಗಳಲು ಹಿಂಜರಿಯಬೇಡಿ. ನಿಮ್ಮ ಪ್ರೀತಿಯನ್ನು ನೋಡಿ ಅವರೂ ಸಹ ನಿಮ್ಮಿಂದ ಪ್ರೇರಿತರಾಗುತ್ತಾರೆ ಮತ್ತು ನಿಮ್ಮ ಮೇಲಿನ ಪ್ರೀತಿಯನ್ನು ತೋರಿಸಲು ಹಿಂಜರಿಯುವುದಿಲ್ಲ.