ಮನೆ ರಾಜ್ಯ ಕೊಡಗಿನ ಜನ ಆಕ್ರೋಶದಲ್ಲಿ ಮೊಟ್ಟೆ ಎಸೆದಿದ್ದಾರೆ: ಎಸ್.ಟಿ.ಸೋಮಶೇಖರ್ ಸಮರ್ಥನೆ

ಕೊಡಗಿನ ಜನ ಆಕ್ರೋಶದಲ್ಲಿ ಮೊಟ್ಟೆ ಎಸೆದಿದ್ದಾರೆ: ಎಸ್.ಟಿ.ಸೋಮಶೇಖರ್ ಸಮರ್ಥನೆ

0

ಮೈಸೂರು(Mysuru): ಕೊಡಗು ಪ್ರವಾಹದಿಂದ ತತ್ತರಿಸಿದ್ದಾಗ ಸಿದ್ದರಾಮಯ್ಯ ಅಲ್ಲಿಗೆ ಹೋಗದೆ ಇರೋ ಕಾರಣಕ್ಕೆ  ಕೊಡಗಿನ ಜನ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಪ್ರಕರಣವನ್ನು ಸಮರ್ಥಿಸಿಕೊಂಡಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆತ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,  ಕೊಡಗಿನ‌ ಜನ ಕಷ್ಟದಲ್ಲಿದ್ದಾಗ ಸಿದ್ದರಾಮಯ್ಯ ಹುಟ್ಟುಹಬ್ಬದ ಸಂಭ್ರಮೋತ್ಸದ ಸುಖದ ಸುಪ್ಪತ್ತಿಗೆಯಲ್ಲಿ ಮೈ ಮರೆತಿದ್ದರು. ಕಷ್ಟ ಕಾಲದಲ್ಲಿ ನಮ್ಮ ಬಳಿಗೆ ಬರಲಿಲ್ಲ. ಈಗ ಬಂದಿದ್ದಾರೆ  ಎಂದು ಜನ ಆಕ್ರೋಶದಲ್ಲಿ ಮೊಟ್ಟೆ ಎಸೆದಿದ್ದಾರೆ ಎಂದು ತಿಳಿಸಿದ್ದಾರೆ.

ಗಾಂಧಿ ಹತ್ಯೆಯ ವಿಚಾರವೇ ಬೇರೆ ಮೊಟ್ಟೆ ಎಸೆದ ಪ್ರಕರಣವೇ ಬೇರೆ, ಕೊಡಗಿನ ಪ್ರವಾಹದ ವೇಳೆ ಸಿದ್ದರಾಮಯ್ಯ ಅಲ್ಲಿಗೆ ಹೋಗಿ ಜನರ ಕಷ್ಟ ಕೇಳಿದ್ದರೆ ಜನ ಅವರ ಮೇಲೆ ಮೊಟ್ಟೆ ಎಸೆಯುತ್ತಿರಲಿಲ್ಲ.  ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಅವರಿಗೆ ಅವರದೇ ಆದ ಸ್ಥಾನಕ್ಕೆ ಗೌರವ ತೂಕವಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರು ಮಾತನಾಡುವ ಮಾತುಗಳಲ್ಲಿ ಬಹಳ ತೂಕವಿರುತ್ತಿತ್ತು ಆದರೆ  ಕೋವಿಡ್ ನಂತರದ ದಿನಗಳಲ್ಲಿ ಸಿದ್ದರಾಮಯ್ಯ ಬರೀ ವಿವಾದಗಳ ಮಾತುಗಳನ್ನೇ ಮಾತನಾಡುತ್ತಿದ್ದಾರೆ. ಎಂದರು.

ಮುಂದುವರಿದು, ಹತ್ಯೆ ಮಾಡುವಂತಹ ವಾತಾವರಣ ನಮ್ಮ ಕರ್ನಾಟಕದಲ್ಲಿ ಇಲ್ಲ,  ಕರ್ನಾಟಕ ಪೊಲೀಸರು ಇಡೀ ದೇಶದಲ್ಲಿ ಬಲಯುತವಾಗಿದೆ. ಯಾರೂ ಅಭದ್ರತೆ ಬಗ್ಗೆ ಚಿಂತೆ ಮಾಡುವುದು ಬೇಡ ಎಂದರು.