ಮನೆ ಅಪರಾಧ ಮದುವೆಯಾದ ನಾಲ್ಕು ತಿಂಗಳಿಗೆ ನವದಂಪತಿ ಆತ್ಮಹತ್ಯೆ

ಮದುವೆಯಾದ ನಾಲ್ಕು ತಿಂಗಳಿಗೆ ನವದಂಪತಿ ಆತ್ಮಹತ್ಯೆ

0

ಮೈಸೂರು: ಪೋಷಕರ ವಿರೋಧದ ‌ನಡುವೆಯೂ ಪ್ರೇಮ ವಿವಾಹವಾಗಿದ್ದ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಸಿಂಗರಮಾರನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ರಾಕೇಶ್ (25), ಅರ್ಚನಾ(20)ಮೃತ ಪ್ರೇಮಿಗಳು. ಎರಡು ವರ್ಷಗಳಿಂದ ರಾಕೇಶ್, ಅರ್ಚನಾ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಒಂದೇ ಊರಿನ ಅಕ್ಕಪಕ್ಕದ ಮನೆಯವರಾಗಿದ್ದರು. ಪ್ರೀತಿಗೆ ಪೋಷಕರು ವಿರೋಧಿಸಿದ್ದ ಹಿನ್ನಲೆ ನಾಲ್ಕು ತಿಂಗಳ ಹಿಂದೆ ಪ್ರೇಮಿಗಳು ಓಡಿ ಹೋಗಿ ಮದುವೆಯಾಗಿದ್ದರು.

ರಾಕೇಶ್ ಮತ್ತು ಅರ್ಚನಾ ತಡರಾತ್ರಿ ಗ್ರಾಮಕ್ಕೆ ಬಂದು ಊರ ಹೊರವಲಯದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು  ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸ್ಥಳಕ್ಕೆ ಬಿಳಿಕೆರೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಿಂದಿನ ಲೇಖನರಾಜಕೀಯ ಕೊರೊನಾ ಹಬ್ಬಿಸುತ್ತಿರುವ ರಾಜಕೀಯ ಪಕ್ಷಗಳು: ಹೆಚ್.ಡಿ.ಕುಮಾರಸ್ವಾಮಿ
ಮುಂದಿನ ಲೇಖನಇಡಿಯಿಂದ ಮಹಾರಾಷ್ಟ್ರ ಸಚಿವ ನಾಯಕ ನವಾಬ್ ಮಲಿಕ್ ಬಂಧನ