ಮನೆ ಕಾನೂನು ಸಂವಿಧಾನ್‌ ಫೆಲೋಶಿಪ್‌: ಅರ್ಜಿ ಸಲ್ಲಿಕೆ ಅವಧಿ ಸೆ.5ರ ವರೆಗೆ ವಿಸ್ತರಣೆ

ಸಂವಿಧಾನ್‌ ಫೆಲೋಶಿಪ್‌: ಅರ್ಜಿ ಸಲ್ಲಿಕೆ ಅವಧಿ ಸೆ.5ರ ವರೆಗೆ ವಿಸ್ತರಣೆ

0

ಸಾಂವಿಧಾನಿಕ ಹಕ್ಕುಗಳು ಮತ್ತು ಜನರ ನಡುವೆ ಸೇತುವೆಯಾಗುವ ಉದ್ದೇಶದಿಂದ ಸರಳ ಮತ್ತು ಕಾರ್ಯ ಸಾಧ್ಯವಾದ ಮಾಹಿತಿಯ ಮೂಲಕ ಕಾನೂನು ಅರಿವು ಮೂಡಿಸಲು ʼನ್ಯಾಯʼ ಸಂಸ್ಥೆಯು ಆರಂಭಿಸಿರುವ ‘ಸಂವಿಧಾನ್‌ ಫೆಲೋಶಿಪ್‌’ಗೆ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಸೆಪ್ಟೆಂಬರ್‌ 5, 2022ಕ್ಕೆ ವಿಸ್ತರಿಸಲಾಗಿದೆ.

ಇದೊಂದು ಮಾಸಿಕ ಪ್ರೋತ್ಸಾಹಧನವಿರುವ ಫೆಲೋಶಿಪ್‌ ಕಾರ್ಯಕ್ರಮವಾಗಿದೆ. ಜನ ನ್ಯಾಯ ಪಡೆಯುವಲ್ಲಿ ಎದುರಾಗುವ ತೊಡಕು, ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕರ್ನಾಟಕದ ಆರು ಬೇರುಮಟ್ಟದ ವಕೀಲರಿಗೆ ಬೆಂಬಲವಾಗಿ ನಿಲ್ಲಲಿದೆ. ವಕೀಲರು ತಮ್ಮ ವೃತ್ತಿಯನ್ನು ಮುಂದುವರೆಸುತ್ತಲೇ ಜನರಿಗೆ ಸಹಾಯ ಮಾಡಲು ಫೆಲೋಶಿಪ್‌ ಒಂದು ಅದ್ಭುತ ಅವಕಾಶ ಎನ್ನುತ್ತದೆ ʼನ್ಯಾಯʼ ಸಂಸ್ಥೆ.

ಆಯ್ಕೆಯಾಗುವ ವಕೀಲರು (ಫೆಲೋಗಳು) ಲಿಟಿಗೇಷನ್ ಮತ್ತು ಕಾನೂನು ಅರಿವು ಕೆಲಸದಲ್ಲಿ ಆಸಕ್ತಿ ಪ್ರದರ್ಶಿಸಿದ ಜಿಲ್ಲಾ ಮಟ್ಟದ ವಕೀಲರಾಗಿರುತ್ತಾರೆ. ಅವರು ಫಲಾನುಭವಿಗಳಿಗೆ ಒದಗಿಸಬಹುದಾದ ಕಾನೂನು ಮಾಹಿತಿಯನ್ನು ರೂಪಿಸಲು ಮತ್ತು ತಳಮಟ್ಟದಲ್ಲಿ ಪ್ರಸಾರ ಮಾಡಲು ನ್ಯಾಯ ತಂಡ ಮತ್ತು ನ್ಯಾಯದ ಪಾಲುದಾರ ಸಮುದಾಯ, ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಾರೆ. ವಿವಿಧ ಭಾರತೀಯ ಕಾನೂನುಗಳು ಮತ್ತು ಸರ್ಕಾರದ ಯೋಜನೆಗಳ ಅಡಿಯಲ್ಲಿ ಖಾತರಿಪಡಿಸಿರುವ ಹಕ್ಕುಗಳು, ಸವಲತ್ತುಗಳ ಬಗ್ಗೆ ಅರ್ಹ ಫಲಾನುಭವಿಗಳಿಗೆ ಮಾಹಿತಿ ನೀಡುವ, ಅದರ ಲಭ್ಯತೆಯನ್ನು ಸರಾಗಗೊಳಿಸುವ ಕೆಲಸವನ್ನು ಫೆಲೋಗಳು ಮಾಡಲಿದ್ದಾರೆ.

ಆಸಕ್ತರು ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್‌ ಗಮನಿಸಬಹುದು: https://kannada.nyaaya.org/access-to-justice-network/samvidhaan-fellowship/