ಮಡಿಕೇರಿ(Madikeri): ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಮುಗಿದ ಬಳಿಕ ‘ಮಡಿಕೇರಿ ಚಲೊ’ ದಿನಾಂಕ ಪ್ರಕಟಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊಡಗು ಜಿಲ್ಲಾಡಳಿತ ಹೇರಿರುವ ನಿಷೇಧಾಜ್ಞೆಯಿಂದಾಗಿ ಆಗಸ್ಟ್ 26 ರಂದು ಕೈಗೊಳ್ಳಬೇಕಿದ್ದ ‘ಮಡಿಕೇರಿ ಚಲೊ’ವನ್ನು ಮುಂದೂಡಲಾಗಿದೆ ಎಂದು ಹೇಳಿದರು.
ಯಾವುದೇ ಕಾರಣ ಇಲ್ಲದೇ ನಿಷೇಧಾಜ್ಞೆ ಜಾರಿಗೊಳಿಸಿರುವುದು ಅಸಂವಿಧಾನಾತ್ಮಕ ನಡೆ ಎಂದು ಟೀಕಿಸಿದ ಅವರು ಜಿಲ್ಲಾಡಳಿತ ಸಂಪೂರ್ಣ ವಿಫಲಗೊಂಡಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆಯುವಂತಹ ಕೃತ್ಯ ಜರುಗಲು ಅವಕಾಶ ಮಾಡಿಕೊಟ್ಟು ತಪ್ಪು ಮಾಡಿದ ಜಿಲ್ಲಾಡಳಿತ ಈಗ ನಿಷೇಧಾಜ್ಞೆ ತರುವ ಮೂಲಕ ಮತ್ತೊಮ್ಮೆ ತಪ್ಪೆಸಗಿದೆ. ಎಂದರು.














