ಮನೆ ಅಪರಾಧ ಬ್ಯಾಂಕಿಗೆ ಖೋಟಾನೋಟು ಜಮಾ ಮಾಡಿ ಹೊಸ ನೋಟಿಗೆ ಬೇಡಿಕೆ ಇಟ್ಟಿದ್ದ ಮಹಿಳೆಯ ಬಂಧನ

ಬ್ಯಾಂಕಿಗೆ ಖೋಟಾನೋಟು ಜಮಾ ಮಾಡಿ ಹೊಸ ನೋಟಿಗೆ ಬೇಡಿಕೆ ಇಟ್ಟಿದ್ದ ಮಹಿಳೆಯ ಬಂಧನ

0

ಬೆಂಗಳೂರು(Bengaluru): ಬ್ಯಾಂಕಿಗೆ ಖೋಟಾ ನೋಟು ಜಮಾ ಮಾಡಿ ಹೊಸ ನೋಟುಗಳಿಗೆ ಬೇಡಿಕೆ ಇಟ್ಟಿದ್ದ ಚಾಲಾಕಿ ಮಹಿಳೆಯನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಗುರಪ್ಪನಪಾಳ್ಯದ ಶೀಲಾ (36) ಬಂಧಿತ ಆರೋಪಿ.

ವೃತ್ತಿಯಲ್ಲಿ ಬ್ಯೂಟಿಷಿಯನ್‌ ಆಗಿರುವ ಈಕೆಯಿಂದ .100 ಮುಖ ಬೆಲೆಯ 117 ನೋಟುಗಳನ್ನು ಜಪ್ತಿ ಮಾಡಲಾಗಿದ್ದು,  ನಕಲಿ ನೋಟಿನ ಮೂಲದ ಬಗ್ಗೆ ಹೆಚ್ಚಿನ ವಿಚಾರಣೆಗಾಗಿ ಆಕೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಏನಿದು ಪ್ರಕರಣ ?

ಆರೋಪಿ ಶೀಲಾ ಆ.10ರಂದು ಮಧ್ಯಾಹ್ನ 3.45ರ ಸುಮಾರಿಗೆ ಜಯನಗರ 9ನೇ ಬ್ಲಾಕ್‌ನಲ್ಲಿ ಇರುವ ಕರ್ನಾಟಕ ಬ್ಯಾಂಕ್‌ ಶಾಖೆಗೆ ಭೇಟಿ ನೀಡಿದ್ದಳು. 100 ಮುಖ ಬೆಲೆಯ 117 ನೋಟುಗಳನ್ನು ಜಮೆ ಮಾಡಿ ಹೊಸ ನೋಟು ಕೊಡುವಂತೆ ಮನವಿ ಮಾಡಿದ್ದಳು.

ನೋಟುಗಳ ಬಗ್ಗೆ ಅನುಮಾನಗೊಂಡು ಬ್ಯಾಂಕ್‌ ಸಿಬ್ಬಂದಿ ಪರಿಶೀಲಿಸಿದಾಗ ಆ ನೋಟು ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಬ್ಯಾಂಕ್‌ ಸಿಬ್ಬಂದಿ ಪ್ರಶ್ನೆ ಮಾಡಿದಾಗ ಶೀಲಾ ಬ್ಯಾಂಕ್‌ನಿಂದ ಜಾಗ ಖಾಲಿ ಮಾಡಿದ್ದಳು. ಈ ಸಂಬಂಧ ಬ್ಯಾಂಕ್‌ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪೊಲೀಸರು ಬ್ಯಾಂಕಿನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಮಹಿಳೆಯನ್ನು ಗುರುತಿಸಿದ್ದು, ನಂತರ  ಕಾರ್ಯಾಚರಣೆ ನಡೆಸಿ ಶೀಲಾಳನ್ನು ಬಂಧಿಸಿದ್ದಾರೆ.

ಹಿಂದಿನ ಲೇಖನಸುತ್ತೂರು ಸೋಮೇಶ್ವರ ಸ್ವಾಮಿ ದೇವಾಲಯ
ಮುಂದಿನ ಲೇಖನನಿಷೇದಾಜ್ಞೆ ಮುಗಿದ ಬಳಿಕ ಮಡಿಕೇರಿ ಚಲೋ ದಿನಾಂಕ ಪ್ರಕಟ: ಹೆಚ್.ಸಿ.ಮಹದೇವಪ್ಪ