ಮನೆ ಆರೋಗ್ಯ ಬಾದಾಮಿ ಸೇವಿಸುವುದರಿಂದ ಸಿಗುವ ಆರೋಗ್ಯ ಲಾಭ

ಬಾದಾಮಿ ಸೇವಿಸುವುದರಿಂದ ಸಿಗುವ ಆರೋಗ್ಯ ಲಾಭ

0

ಬಾದಾಮಿಯನ್ನು ನೆನೆದು ಹಾಕಿ ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಉಪಯೋಗವಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಮೊದಲು ಒಂದು ಕಪ್ ನೀರು ತೆಗೆದುಕೊಂಡು ಅದರಲ್ಲಿ ಒಂದು ಹಿಡಿ ಬಾದಾಮಿ ಬೀಜಗಳನ್ನು ಹಾಕಿ ಆರರಿಂದ ಎಂಟು ಗಂಟೆಗಳ ಕಾಲ ನೆನೆಹಾಕಬೇಕು. ಮರುದಿನ ಬೆಳಗ್ಗೆ ಬಾದಾಮಿ ನೆನೆಹಾಕಿದ ನೀರನ್ನು ಹೊರಚೆಲ್ಲಿ ಬಾದಾಮಿ ಬೀಜಗಳನ್ನು ಸಿಪ್ಪೆ ಸುಲಿಯಬೇಕು. ನೀವು ಬೇಕಾದರೆ ಇವುಗಳನ್ನು ಒಂದು ಪ್ಲಾಸ್ಟಿಕ್ ಕಂಟೈನರ್ ನಲ್ಲಿ ಹಾಕಿ ಇಟ್ಟುಕೊಳ್ಳಬಹುದು.

ಬಾದಾಮಿ ಬೀಜಗಳಲ್ಲಿ ವಿಟಮಿನ್ ಈ, ನಾರಿನ ಅಂಶಗಳು, ಒಮೆಗಾ 3 ಫ್ಯಾಟಿ ಆಮ್ಲಗಳು, ಒಮೆಗಾ 6 ಫ್ಯಾಟಿ ಆಮ್ಲಗಳು, ಪ್ರೋಟೀನ್ ಅಂಶ ಇತ್ಯಾದಿಗಳು ಹೆಚ್ಚಾಗಿ ಕಂಡು ಬರುತ್ತದೆ. ಇದರ ಜೊತೆಗೆ ಮ್ಯಾಂಗನೀಸ್ ಕೂಡ ಇರುವುದರಿಂದ ಮೂಳೆಗಳ ಜೊತೆಗೆ ರಕ್ತಸಂಚಾರವನ್ನು ವೃದ್ಧಿ ಸುತ್ತದೆ. ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆ ಇರುವವರಿಗೆ ಇವುಗಳ ಪ್ರಯೋಜನ ಜಾಸ್ತಿ. ಮೈ ಕೈ ನೋವು ಮತ್ತು ನರನಾಡಿಗಳ ತೊಂದರೆ ದೂರವಾಗುತ್ತದೆ.

ದೇಹದ ತೂಕ ನಿಯಂತ್ರಣ ಆಗುತ್ತದೆ

ಬಾದಾಮಿ ಬೀಜಗಳನ್ನು ನೀವು ಸಂಜೆಯ ಸಮಯದಲ್ಲಿ ಸ್ನಾಕ್ಸ್ ತರಹ ತಿನ್ನಬಹುದು. ಹೀಗೆ ತಿನ್ನುವುದರಿಂದ ಹೊಟ್ಟೆ ಹಸಿವು ನಿಯಂತ್ರಣವಾಗುತ್ತದೆ ಮತ್ತು ದೀರ್ಘಕಾಲದವರೆಗೆ ಏನಾದರೂ ತಿನ್ನಬೇಕು ಎನ್ನುವ ಬಯಕೆ ಇಲ್ಲವಾಗುತ್ತದೆ. ಹೀಗಾಗಿ ನೀವು ಸುಲಭವಾಗಿ ನಿಮ್ಮ ದೇಹದ ತೂಕವನ್ನು ಕ್ಯಾಲೊರಿಗಳನ್ನು ಕರಗಿಸುವ ಮೂಲಕ ಕಡಿಮೆ ಮಾಡಿಕೊಳ್ಳಬಹುದು.

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ನೆನೆಸಿದ ಬಾದಾಮಿ ಬೀಜಗಳಲ್ಲಿ ನಿಮ್ಮ ದೇಹದ ಕೆಟ್ಟ ಕೊಬ್ಬಿನ ಅಂಶ ಅಥವಾ ಎಲ್ಡಿಎಲ್ ಪ್ರಮಾಣವನ್ನು ಕಡಿಮೆ ಮಾಡುವ ಗುಣವಿದೆ. ಇದೇ ಸಮಯದಲ್ಲಿ ನಿಮ್ಮ ರಕ್ತದಲ್ಲಿ ಒಳ್ಳೆಯ ಕೊಬ್ಬಿನ ಅಂಶ ಅಥವಾ ಹೆಚ್ ಡಿ ಎಲ್ ಹೆಚ್ಚಾಗು ವಂತೆ ಸಹ ಮಾಡುತ್ತದೆ. ಹೀಗಾಗಿ ಹೃದಯದ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು.

ಜೀರ್ಣಶಕ್ತಿ ಹೆಚ್ಚಾಗುತ್ತದೆ

ನೆನೆಸಿದ ಬಾದಾಮಿ ಬೀಜಗಳಲ್ಲಿ ಪ್ರಮುಖವಾಗಿ ಆರೋಗ್ಯಕರವಾದ ಕೊಬ್ಬಿನ ಅಂಶಗಳು ಇರುತ್ತವೆ. ಇವುಗಳ ಕಾರಣದಿಂದ ದೇಹದಲ್ಲಿ ಜೀರ್ಣಶಕ್ತಿಗೆ ಯಾವುದೇ ಕೊರತೆ ಎದುರಾಗುವುದಿಲ್ಲ. ಆರೋಗ್ಯಕರ ವಾದ ರೀತಿಯಲ್ಲಿ ನೀವು ಸೇವನೆ ಮಾಡಿದ ಆಹಾರ ಬಹಳ ಬೇಗನೆ ಜೀರ್ಣವಾಗುತ್ತದೆ.