ಮೈಸೂರು(Mysuru): ಸ್ವಾತಂತ್ರ್ಯ ಚಳವಳಿಯ ಇತಿಹಾಸ ಅರಿಯಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಹೇಳಿದರು.
ಸಿದ್ದಾರ್ಥ ನಗರದ ಟೆರೇಸಿಯನ್ ಕಾಲೇಜಿನ ಇತಿಹಾಸ ವಿಭಾಗದಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪುರಾತತ್ವ ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಸಮಾಜ ವಿಜ್ಞಾನ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘75ನೇ ವರ್ಷದ ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ ಪುನರಾವರ್ತನೆ ಅವಲೋಕನ’ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮಗೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ, ಪ್ರಾಣ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸಬೇಕು ಎಂದರು.
ಜೆಎನ್‌ಯು ಇತಿಹಾಸ ಪ್ರಾಧ್ಯಾಪಕ ಪ್ರೊ.ಇಂದಿವರ್ ಕಾಮ್ಟೇಕರ್, ಎರ್ನಾಕುಲಂನ ಸೇಂಟ್ ತೆರೇಸಾ ಕಾಲೇಜಿನ ಡಾ.ಪ್ರೀತಿ ಮಾತನಾಡಿದರು.
ಪುರಾತತ್ವ ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜು, ಬೆಂಗಳೂರಿನ ಟೌಕಾನ್‌ನ ಸಂಸ್ಥೆಯ ನಿರ್ದೇಶಕ ಕೆ.ಕೆ.ಮಿಶ್ರಾ, ಮೈಸೂರಿನ ಟೆರೇಸಿಯನ್ ಕಾಲೇಜು ನಿರ್ದೇಶಕ ಡಾ.ಜುವಾನಿತಾ, ಮೈಸೂರು ಟೆರೇಸಿಯನ್ ಸಂಸ್ಥೆಗಳ ವ್ಯವಸ್ಥಾಪಕಿ ಅನಿತಾ ಡಿಸೋಜಾ, ಪ್ರಾಂಶುಪಾಲೆ ಡಾ.ಸಿ.ಜಯಂತಿ, ಸಂಘಟನಾ ಕಾರ್ಯದರ್ಶಿ ಡಾ.ಅನಾ ಮೇರಿ, ಸಂಶೋಧನಾ ಸಂಯೋಜಕ ಎಂ.ನಿಕೇತನ್, ಶಬೀಗಾ ಅಮರೀನ್, ಸಹಾಯಕ ಪ್ರಾಧ್ಯಾಪಕಿ ದೇಬ್ತಾರಾ ಸುರೇಶ್, ಶಿವಪ್ರಸಾದ್ ಇದ್ದರು.














