ಮೈಸೂರು: ಜಿ.ಎಚ್.ನಾಯಕ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ವಿಮರ್ಶಕರಾದ ಗೋವಿಂದರಾಯ ಹಮ್ಮಣ್ಣ ನಾಯಕ ಶುಕ್ರವಾರ ನಿಧನ ಹೊಂದಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಅವರಿಗೆ ಪತ್ನಿ ಮೀರಾ ನಾಯಕ್, ಪುತ್ರಿ ಕೀರ್ತಿ ಹಾಗೂ ಮೊಮ್ಮಕ್ಕಳು ಇದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು ಮೈಸೂರಿನ ಕುವೆಂಪು ನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಜಿ.ಹೆಚ್. ನಾಯಕ್ ಅವರು ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದವರಾದ ಜಿ.ಹೆಚ್. ನಾಯಕ್ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ, ಮುಂದೆ ಪ್ರಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಇವರು ನಿವೃತ್ತಿ ಬಳಿಕ ಮೈಸೂರಿನ ಕುವೆಂಪು ನಗರದಲ್ಲಿ ನೆಲೆಸಿದ್ದರು.
ನಾಯಕ್ ಅವರ ಕೃತಿಗಳು
ಸಮಕಾಲೀನ (೧೯೭೩)
ಅನಿವಾರ್ಯ (೧೯೮೦)
ನಿರಪೇಕ್ಷೆ (೧೯೮೪)
ನಿಜದನಿ (೧೯೮೮)
ವಿನಯ ವಿಮರ್ಶೆ (೧೯೯೧)
ಸಕಾಲಿಕ (೧೯೯೫)
ಗುಣ ಗೌರವ (೨೦೦೨)
ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (೨೦೦೨)
ಕೃತಿ ಸಾಕ್ಷಿ (೨೦೦೬)
ಸ್ಥಿತಿ ಪ್ರಜ್ಞೆ (೨೦೦೭)
ಮತ್ತೆ ಮತ್ತೆ ಪಂಪ (೨೦೦೮)
ಸಾಹಿತ್ಯ ಸಮೀಕ್ಷೆ (೨೦೦೯)
ಉತ್ತರಾರ್ಧ (೨೦೧೧)
ಸಂಪಾದನೆ
ಕನ್ನಡ ಸಣ್ಣಕಥೆಗಳು
ಹೊಸಗನ್ನಡ ಕವಿತೆಗಳು
ಸಂವೇದನೆ (ಅಡಿಗರ ಗೌರವ ಗ್ರಂಥ)
ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ
ಶತಮಾನದ ಕನ್ನಡ ಸಾಹಿತ್ಯ (ಸಂಪುಟ – ೧.೨)
ಆತ್ಮಕಥನ- ಬಾಳು
ಪ್ರಶಸ್ತಿಗಳು
ಉತ್ತರಾರ್ಧ ಕೃತಿಗೆ 2014 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ನಿರಪೇಕ್ಷ ವಿಮರ್ಶಾ ಕೃತಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ಯ ಪ್ರಶಸ್ತಿ.
ನಿಜದನಿ ವಿಮರ್ಶಾ ಕೃತಿಗೆ ‘ವಿ.ಎಂ.ಇನಾಂದಾರ ಸ್ಮಾರಕ ಬಹುಮಾನ’ ಲಭಿಸಿವೆ.
ಪಂಪ ಪ್ರಶಸ್ತಿ
ಮನುಷ್ಯನಿಗೆ ಹಣ ಮುಖ್ಯನಾ?…. ಇಲ್ಲ ಗುಣ ಮುಖ್ಯಾನಾ?……
ನಾಡ ದೇವತೆ…. ಶ್ರೀ ಚಾಮುಂಡೇಶ್ವರಿ…🙏🏻
ನಮ್ಮ ರಾಜ್ಯದ ಭವಿಷ್ಯ ಚಿಂತಾ ಜನಕವಾಗಿದೆ ಪುಗಸಟ್ಟೆ ಕೊಡುವ ಅವಾಂತರ
ನಿಮ್ಹಾನ್ಸ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಅಪ್ಪ ಬರಿಮಾತಲ್ಲ ಊಹೆಗೂ ನಿಲುಕದ ಆಕಾಶ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.