ಮನೆ ರಾಜ್ಯ ಮೇಯರ್ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಇಲ್ಲ: ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ

ಮೇಯರ್ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಇಲ್ಲ: ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ

0

ಮೈಸೂರು(Mysuru): ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಯಾರ ಜೊತೆಯೂ ಹೊಂದಾಣಿಕೆ ಇಲ್ಲದೇ ಪ್ರತ್ಯೇಕವಾಗಿ ಸ್ಪರ್ಧಿಸುವಂತೆ ಅಭಿಪ್ರಾಯ ಬಂದಿದೆ ಎಂದು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ತಿಳಿಸಿದರು.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಉಸ್ತುವಾರಿಗಳಾದ ನಿರ್ಮಲ ಕುಮಾರ ಸುರಾನಾ, ರಾಜ್ಯದ ಉಪಾಧ್ಯಕ್ಷರುಗಳು ಬಂದು  ಬಿಜೆಪಿಯ ಪಾಲಿಕೆಯ ಸದಸ್ಯರುಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡಬೇಕು ಎಂದು ತಿಳಿಸಿದ್ದಾರೆ.

ಮುಂದೆ ಸಾರ್ವತ್ರಿಕ ಚುನಾವಣೆ ಇರುವುದರಿಂದ ಮೈತ್ರಿ ಅವಶ್ಯಕತೆ ಇಲ್ಲ. ಪ್ರತ್ಯೇಕವಾಗಿ ಸ್ಪರ್ಧೆ ಮಾಡೋಣ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ನಮ್ಮ ಸಂಖ್ಯಾ ಬಲದ ಪ್ರಕಾರ 27   ಇದೆ. ಕಾಂಗ್ರೆಸ್’ಗೆ  26 ಸಂಖ್ಯಾಬಲವಿದೆ. ನಮ್ಮ ಸಂಖ್ಯಾಬಲ ಹೆಚ್ಚು ಇರುವುದರಿಂದ ಸಂಖ್ಯಾಬಲದೊಂದಿಗೆ ಮಾಡೋಣ ಎನ್ನುವ ಅಭಿಪ್ರಾಯವನ್ನಿರಿಸಿದ್ದಾರೆ. ಕಾಂಗ್ರೆಸ್ ಗೆ 26 ಇರುವುದರಿಂದ ಅವರು ಜೆಡಿಎಸ್ ನವರು ಮೈತ್ರಿ ಮಾಡಿಕೊಳ್ಳುತ್ತಾರೆಂದರೆ ನಾವೇನೂ ಮಾಡಲು ಸಾಧ್ಯವಿಲ್ಲ. ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ. ಪ್ರತ್ಯೇಕ ಸ್ಪರ್ಧೆ ಮಾಡೋಣ ಎಂದಿದ್ದಾರೆ ಎಂದು ತಿಳಿಸಿದರು.

8 ಮಂದಿ ಮೇಯರ್ ಗಾದಿಗೆ ಆಕಾಂಕ್ಷಿಗಳಿದ್ದಾರೆ. 6 ಮಂದಿ ಉಪಮೇಯರ್ ಆಕಾಂಕ್ಷಿಗಳಿದ್ದಾರೆ. ಮೈಸೂರು ನಗರದ ಕೋರ್ ಟೀಂ ಸೇರಿ ಶಾರ್ಟ್ ಲಿಸ್ಟ್ ಮಾಡಿ ಹೇಳಿದ್ದಾರೆ. 5ನೇ ತಾರೀಖಿನೊಳಗೆ ನಮ್ಮ ಅಭ್ಯರ್ಥಿ ಅಂತಿಮಗೊಳಿಸಿ ಪಟ್ಟಿಯನ್ನು ಕಳುಹಿಸುತ್ತೇವೆ. ಆ ನಂತರ 6ರಂದು ಬೆಳಿಗ್ಗೆ ಅನೌನ್ಸ್ ಮಾಡುತ್ತೇವೆ ಎಂದರು.

ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಸೆಪ್ಟೆಂಬರ್ 6ರಂದು ಚುನಾವಣೆ ನಡೆಯಲಿದೆ.