ಮನೆ ಅಪರಾಧ ಲೈಂಗಿಕ ದೌರ್ಜನ್ಯ ಪ್ರಕರಣ: ಡಿವೈಎಸ್’ಪಿ ಕಚೇರಿಯಲ್ಲಿ ಮುರುಘಾ ಶರಣರ ವಿಚಾರಣೆ

ಲೈಂಗಿಕ ದೌರ್ಜನ್ಯ ಪ್ರಕರಣ: ಡಿವೈಎಸ್’ಪಿ ಕಚೇರಿಯಲ್ಲಿ ಮುರುಘಾ ಶರಣರ ವಿಚಾರಣೆ

0

ಚಿತ್ರದುರ್ಗ(Chitradurga): ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಡಿವೈಎಸ್‌ಪಿ ಕಚೇರಿಯಲ್ಲಿ ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಲಾಗಿದೆ.

ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾ ಶರಣರನ್ನು ಶುಕ್ರವಾರ ಸಂಜೆ ಪೊಲೀಸ್ ವಶಕ್ಕೆ ಪಡೆದ ತನಿಖಾ ತಂಡ, ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ಡಿವೈಎಸ್‌ಪಿ ಕಚೇರಿಗೆ ಕರೆತಂದರು. ಮಧ್ಯರಾತ್ರಿಯವರೆಗೂ ಶರಣರನ್ನು ವಿಚಾರಣೆ ನಡೆಸಲಾಯಿತು.

ವಿಚಾರಣೆ ಬಳಿಕ ಶರಣರು ರಾತ್ರಿ ಅಲ್ಲೇ ಮಲಗಿದ್ದರು. ಶನಿವಾರ ಬೆಳಿಗ್ಗೆ ಮತ್ತೆ ವಿಚಾರಣೆ ಆರಂಭವಾಗಿದೆ.

ತನಿಖಾಧಿಕಾರಿ ಅನಿಲ್ ಕುಮಾರ್ ನೇತೃತ್ವದಲ್ಲಿ ಅವರನ್ನು ಪ್ರಶ್ನಿಸಲಾಗುತ್ತಿದೆ. ವಿಚಾರಣೆಗೆ ಶರಣರು ಸ್ಪಂದಿಸುತ್ತಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಡಿವೈಎಸ್‌ಪಿ ಕಚೇರಿ ಸುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಸುತ್ತ ಬ್ಯಾರಿಕೇಡ್‌ಗಳನ್ನು ಹಾಕಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ.

ಹಿಂದಿನ ಲೇಖನಕರ್ಣಾಟಕ ಸಂಗೀತ ಗಾಯಕ ಟಿ.ವಿ ಶಂಕರನಾರಾಯಣನ್‌ ನಿಧನ
ಮುಂದಿನ ಲೇಖನಮೇಯರ್ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಇಲ್ಲ: ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ