ಮನೆ ಅಪರಾಧ ಬಾಲಕಿಯ ಕತ್ತು ಸೀಳಿ, ಬಾಯಿಗೆ ಆ್ಯಸಿಡ್ ಸುರಿದು ಲೈಂಗಿಕ ದೌರ್ಜನ್ಯ

ಬಾಲಕಿಯ ಕತ್ತು ಸೀಳಿ, ಬಾಯಿಗೆ ಆ್ಯಸಿಡ್ ಸುರಿದು ಲೈಂಗಿಕ ದೌರ್ಜನ್ಯ

0

ಆಂಧ್ರ ಪ್ರದೇಶ(Andrapradesh): ಲೈಂಗಿಕ ದೌರ್ಜನ್ಯ ವಿರೋಧಿಸಿದ ಬಾಲಕಿಯ ಕತ್ತು ಸೀಳಿ, ಆಕೆಯ ಬಾಯಿಗೆ ಆ್ಯಸಿಡ್ ಸುರಿದಿರುವ ಹೃದಯ ವಿದ್ರಾವಕ ಘಟನೆಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಚೆಮುಡುಗುಂಟದ ನಕ್ಕಲ ಗಿರಿಜನ ಕಾಲೋನಿಯಲ್ಲಿ ನಡೆದಿದೆ.

ಸೆ. 5 ರ ಸೋಮವಾರ ರಾತ್ರಿ 14 ವರ್ಷದ ಬಾಲಕಿ ತನ್ನ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿ ಬಾಲಕಿಯ ಮನೆಗೆ ನುಗ್ಗಿ ದುಷ್ಕೃತ್ಯವೆಸಗಿದ್ದಾನೆ.

ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ, ಸಂತ್ರಸ್ತೆ ವಾಶ್ ರೂಂಗೆ ಓಡಿ ಬಂದು ಒಳಗೆ ಬೀಗ ಹಾಕಿಕೊಂಡಿದ್ದಾಳೆ. ಆರೋಪಿ ಬಾಗಿಲು ಒಡೆದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ. ಆತನ ಪ್ರಯತ್ನಕ್ಕೆ ಆಕೆ ಪ್ರತಿರೋಧ ತೋರಿದ ಕಾರಣ ಆತ ಆಕೆಯ ಮೇಲೆ ಟಾಯ್ಲೆಟ್ ಕ್ಲೀನಿಂಗ್ ಆ್ಯಸಿಡ್‌ನ್ನು ಆಕೆಯ ಬಾಯಿಗೆ ಮತ್ತು ಮುಖದ ಮೇಲೆ ಸುರಿದಿದ್ದಾನೆ ಎಂದು ವರದಿಯಾಗಿದೆ. ಆಕೆ ಕಿರುಚಲು ಆರಂಭಿಸಿದಾಗ ದುಷ್ಕರ್ಮಿ ಚಾಕುವಿನಿಂದ ಆಕೆಯ ಕತ್ತು ಸೀಳಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯನ್ನು ನೆರೆಹೊರೆಯವರು ಕಂಡು, ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನೆಲ್ಲೂರಿನಲ್ಲಿರುವ ಅಪೋಲೋ ಆಸ್ಪತ್ರೆಯ ಶಾಖೆಯಲ್ಲಿ ಬಾಲಕಿಯನ್ನು ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ.

ನೆಲ್ಲೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ ರಾವ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ತಮಗೆ ಆರೋಪಿಯ ಬಗ್ಗೆ ಖಚಿತ ಮಾಹಿತಿ ಇದ್ದು, ಶೀಘ್ರವೇ ಆರೋಪಿಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.