ಮನೆ ರಾಜ್ಯ ಮೂಲ ವಿಜ್ಞಾನ ಬಹಳ ಮುಖ್ಯ: ಎ.ಎಚ್‌.ವಿಶ್ವನಾಥ್‌

ಮೂಲ ವಿಜ್ಞಾನ ಬಹಳ ಮುಖ್ಯ: ಎ.ಎಚ್‌.ವಿಶ್ವನಾಥ್‌

0

ಮೈಸೂರು(Mysuru): ಮೂಲ‌ ವಿಜ್ಞಾನದ ಮೇಲೆ ಸಾಮಾಜಿಕ ಜಾಲತಾಣವು ಆಕ್ರಮಣ ನಡೆಸುತ್ತಿದೆ. ಆದರೆ ಮೂಲ ವಿಜ್ಞಾನ ಬಹಳ ಮುಖ್ಯ ಎನ್ನುವುದನ್ನು ಮರೆಯಬಾರದು  ಎಂದು‌ ವಿಧಾನಪರಿಷತ್‌ ಸದಸ್ಯ ಎ.ಎಚ್‌.ವಿಶ್ವನಾಥ್‌ ತಿಳಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕೆಆರ್‌ವಿಪಿ) ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಜಿ.ಪಂ., ಜಿಲ್ಲಾಡಳಿತ, ಕೆಎಸ್‌ಒಯು ಹಾಗೂ ಮೈಸೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜಕೀಯ ‌ವಿಜ್ಞಾನವು ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಾಜಕೀಯ ಕ್ಷೇತ್ರ ಹಾಗೂ ರಾಜಕಾರಣಿಗಳನ್ನು ಮೈಲಿಗೆಯಾಗಿ ನೋಡುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗುತ್ತದೆ. ಇದು ದೂರಾಗಬೇಕು  ಎಂದು ಆಶಿಸಿದರು.

ಸಮ್ಮೇಳನದಲ್ಲಿ ಮಂಡನೆಯಾದ ಉಪನ್ಯಾಸಗಳನ್ನು ಒಳಗೊಂಡ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಕೆಆರ್‌ವಿಪಿ ಅಧ್ಯಕ್ಷ ಗಿರೀಶ್ ಕಡ್ಲೆವಾಡ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‌ಒಯು ಕುಲಸಚಿವ ಡಾ.ಎ.ಖಾದರ್ ಪಾಷ, ಉಪಾಧ್ಯಕ್ಷರಾದ ಎಚ್‌.ಜಿ.ಹುದ್ದಾರ್‌, ದೊಡ್ಡಬಸಪ್ಪ, ಖಜಾಂಚಿ ಈ.ನಾಗರಾಜ್, ಜಂಟಿ ಕಾರ್ಯದರ್ಶಿ ಬಿ.ಎನ್.ಶ್ರೀನಾಥ್, ಗೌರವ ಕಾರ್ಯದರ್ಶಿ ಸಿ.ಕೃಷ್ಣೇಗೌಡ, ಸಮ್ಮೇಳನದ ರಾಜ್ಯ ಸಂಯೋಜಕ ಎ.ಎನ್.ಮಹೇಶ್ ಇದ್ದರು.

ಗಾಮನಹಳ್ಳಿ ಸ್ವಾಮಿ ಪ್ರಾರ್ಥಿಸಿದರು. ಜಿಲ್ಲಾ ಸಮಿತಿಯ ಅಧ್ಯಕ್ಷ ಡಾ.ಶೇಖರ್ ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ಜಿ.ಬಿ.ಸಂತೋಷ್‌ಕುಮಾರ್‌ ನಿರೂಪಿಸಿದರು.