ಮನೆ ರಾಜಕೀಯ ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಇಫ್ತಿಯಾರ್ ಕೂಟ

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಇಫ್ತಿಯಾರ್ ಕೂಟ

0

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಿ ಮುಸ್ಲಿಂ ಬಾಂಧವರಿಗೆಬ ರಮಝಾನ್ ಶುಭಾಶಯ ಕೋರಿದರು.
ನಗರದ ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಪ್ರೆಸ್ಟೀಜ್ ಹಾಲ್ ನಲ್ಲಿ ರವಿವಾರ ಸಿದ್ದರಾಮಯ್ಯ ಇಫ್ತಿಯಾರ್ ಕೂಟ ಆಯೋಜನೆ ಮಾಡಿದ್ದಾರೆ.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಬೇಡ, ನಿಮ್ಮ ಧರ್ಮದ ಆಚರಣೆ ನಿಮಗೆ ನಮ್ಮ ಧರ್ಮದ ಆಚರಣೆ ನಮಗೆ. ಆದರೆ ಸಂವಿಧಾನ ಎಲ್ಲರೂ ಸಮಾನರು ಎಂದು ಹೇಳಿದೆ. ಹಾಗಾಗಿ ನಾವು ಮೊದಲು ಮನುಷ್ಯರು ಎಲ್ಲರೂ ಒಟ್ಟಾಗಿ ಹೋಗಬೇಕು ಎಂದು ಹೇಳಿದರು.
ನಾನು ಕಳೆದ 23 ವರ್ಷಗಳಿಂದಲೂ ಇಫ್ತಾರ್ ಕೂಟ ಆಯೋಜನೆ ಮಾಡುತ್ತಿದ್ದೇನೆ.‌ಕಳೆದ ಎರಡು ವರ್ಷ ಕೋವಿಡ್ ಕಾರಣದಿಂದ ಮಾಡಲು ಆಗಿರಲಿಲ್ಲ. ಹಾಗಾಗಿ ಈ ಬಾರಿ ಆಯೋಜನೆ ಮಾಡಿದ್ದೇನೆ. ಉಪವಾಸ ಇರುವ ಎಲ್ಲರಿಗೂ ಮತ್ತು ಇಡೀ ಮಿಸಲ್ಮಾನ್ ಬಂಧುಗಳಿಗೆ ರಂಜಾನ್ ಹಬ್ಬದ ಶುಭಾಶಯಗಳು ಎಂದು ಹೇಳಿದರು.

ಇದೇ ವೇಳೆ ಶಾಸಕ ತನ್ವೀರ್ ಸೇಠ್, ಎಚ್.ಪಿ.ಮಂಜುನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಮಾಜಿ ಶಾಸಕ ಎಂ.ಕೆ.ಸೋಶೇಖರ್, ಉಪಮೇಯರ್ ಅನ್ವರ್ ಬೇಗ್, ಆರಿಫ್ ಹುಸೇನ್, ಡಾ.ಪುಷ್ಪಾ ಅಮರ್ ನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಶಿವು, ಕೆ.ಎಸ್.ಶಿವರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಿಂದಿನ ಲೇಖನಅಕ್ರಮ ಸಂಬಂಧವು ಪತ್ನಿಗೆ ಪತಿಯಿಂದ ಜೀವನಾಂಶ ಪಡೆಯಲು ಅಡ್ಡಿಯಾಗುವುದಿಲ್ಲ: ದೆಹಲಿ ಹೈಕೋರ್ಟ್
ಮುಂದಿನ ಲೇಖನಸುಪಾರಿ ಕೊಟ್ಟು ಅಳಿಯನ ಕೊಲ್ಲಿಸಿದ ಮಾವ