ಶ್ರೀನಗರ್(Sringara): ಜಮ್ಮು ಮತ್ತು ಕಾಶ್ಮೀರದ ಸಬ್-ಇನ್ಸ್ ಪೆಕ್ಟರ್(ಎಸ್ಐ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಮ್ಮು, ಶ್ರೀನಗರ, ಹರಿಯಾಣ, ಗಾಂಧಿನಗರ, ಗಾಜಿಯಾಬಾದ್, ಬೆಂಗಳೂರು, ದೆಹಲಿ ಸೇರಿದಂತೆ 33 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿ ಶೋಧ ಕಾರ್ಯ ಮುಂದುವರೆಸಿದೆ.
ಜಮ್ಮು ಕಾಶ್ಮೀರದ ಎಸ್ಎಸ್ ಬಿ ಪರೀಕ್ಷೆಗಳ ನಿಯಂತ್ರಣದ ಮಾಜಿ ಅಧ್ಯಕ್ಷ ಅಶೋಕ್ ಕುಮಾರ್ ಮತ್ತು ಖಾಲಿದ್ ಜಹಾಂಗೀರ್ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ವಿಚಾರಣೆ ಕೈಗೊಂಡಿದ್ದಾರೆ.
ಜಮ್ಮು ಕಾಶ್ಮೀರದ ಪೊಲೀಸರು, ಡಿಎಸ್ ಪಿ, ಸಿಆರ್ ಪಿಎಫ್ ಹಂತದ ಅಧಿಕಾರಿಗಳ ಮನೆ ಮೇಲೂ ದಾಳಿಗಳನ್ನು ನಡೆಸಲಾಗಿದೆ.