ಮನೆ ಸುದ್ದಿ ಜಾಲ ತಮಿಳುನಾಡಲ್ಲಿ ರಾಹುಲ್​​ ಮಾತು ಕೇಳದೆ ಕೆಟ್ಟಿತಾ ಕಾಂಗ್ರೆಸ್​​ ?

ತಮಿಳುನಾಡಲ್ಲಿ ರಾಹುಲ್​​ ಮಾತು ಕೇಳದೆ ಕೆಟ್ಟಿತಾ ಕಾಂಗ್ರೆಸ್​​ ?

0

ಚೆನ್ನೈ ಸೋಮವಾರ (ಮೇ 04) ಪಂಚರಾಜ್ಯ ಚುನಾವಣೆಯಲ್ಲಿ ಕೇರಳ ಒಂದನ್ನು ಹೊರತುಪಡಿಸಿದರೆ ಉಳಿದೆಡೆ ಕಾಂಗ್ರೆಸ್​ ಸಾಧನೆ ಹೇಳಿಕೊಳ್ಳುವ ಮಟ್ಟಿಗೆ ಏನೂ ಆಗಿಲ್ಲ ಎನ್ನಬಹುದು. ಈ ನಡುವೆ ತಮಿಳುನಾಡು ಚುನಾವಣೆಗೆ ಸಂಬಂಧ ಪಟ್ಟಹಾಗೆ ಅಚ್ಚರಿಯ ವಿಷಯವೊಂದು ಬೆಳಕಿಗೆ ಬಂದಿದ್ದು ಎನ್ನಲಾಗುತ್ತಿದೆ, ರಾಹುಲ್​​ ಗಾಂಧಿ ಹೇಳಿದ್ದ ಮಾತು ಕೇಳದೆ ಹೋಗಿದ್ದೇ ತಮಿಳುನಾಡಲ್ಲಿ ಕಾಂಗ್ರೆಸ್​​ನ ಕಳಪೆ ಸಾಧನೆಗೆ ಕಾರಣವಾಗಿದ್ಯಾ ಎಂಬ ಚರ್ಚೆ ಶುರುವಾಗಿದೆ ಎನ್ನಲಾಗುತ್ತಿದೆ.

ತಮಿಳುನಾಡು ವಿಧಾನಸಭೆ ಚುನಾವಣೆಗೆ ನಟ ದಳಪತಿ ವಿಜಯ್​​ ನೇತೃತತ್ವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಜೊತೆ ಮೈತ್ರಿ ಮಾಡಿಕೊಳ್ಳುವಂತೆ ರಾಹುಲ್​​ ಗಾಂಧಿ ಸೂಚಿಸಿದ್ದರು. ಆದರೆ ಟಿವಿಕೆ ಜತೆ ಮೈತ್ರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಿ.ಚಿದಂಬರಂ ಒಪ್ಪಿರಲಿಲ್ಲ. ಬದಲಾಗಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಜೊತೆಗೆ ಹೋಗೋಣ ಎಂದು ಅವರು ಸೂಚಿಸಿದ್ದರು. ಈ ವೇಳೆ ಹಿರಿಯರ ಮಾತಿಗೆ ಬೆಲೆ ಕೊಟ್ಟು ರಾಹುಲ್ ಗಾಂಧಿ ಕೂಡ ಸುಮ್ಮನಾಗಿದ್ದರು. ಹೀಗಾಗಿ ಖರ್ಗೆ, ಚಿದಂಬರಂ ನಿರ್ಧಾರದಿಂದ ಕಾಂಗ್ರೆಸ್​ಗೆ ಸೋಲು ಎಂಬ ಚರ್ಚೆ ಪಕ್ಷದಲ್ಲಿಯೇ ಶುರುವಾಗಿದೆ ಎಂದು ಎಐಸಿಸಿ ಮೂಲದ ನಾಯಕರಿಂದಲೇ ಮಾಹಿತಿ ಸಿಕ್ಕಿದೆ ಎನ್ನಬಹುದು. ಹೀಗೆ 234 ಸದಸ್ಯರ ಬಲವನ್ನು ಹೊಂದಿರುವ ತಮಿಳುನಾಡು ವಿಧಾನಸಭೆಯ ಅಧಿಕಾರ ಹಿಡಿಯಲು 118 ಸ್ಥಾನಗಳ ಅಗತ್ಯವಿದೆ. ನಟ ದಳಪತಿ ವಿಜಯ್​​ ನೇತೃತತ್ವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಬಹುಮತಕ್ಕೆ ಬೆರಳೆಣಿಕೆಯ ಸೀಟ್​​ಗಳು ಕೊರತೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಹೀಗಾಗಿ ಚುನಾವಣಾ ಫಲಿತಾಂಶ ಭಾರಿ ಕುತೂಹಲಕ್ಕೆ ಕಾರಣವಾಗಿದ್ದು, ಸರ್ಕಾರ ರಚಿಸಲು ಅನ್ಯರ ಬೆಂಬಲ ಅನಿವಾರ್ಯವಾದರೆ ವಿಜಯ್​​ ಯಾರ ಜೊತೆ ಕೈಜೋಡಿಸಲಿದ್ದಾರೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಈ ನಡುವೆ ಮೈತ್ರಿ ಸಂಬಂಧ ಕಾಂಗ್ರೆಸ್​​ ಟಿವಿಕೆ ಜೊತೆ ಮಾತುಕತೆ ನಡೆಸಿದೆ ಎನ್ನಲಾಗಿದ್ದು, ವಿಜಯ್​​ ತಂದೆಯೂ ಇದಕ್ಕೆ ಬೆಂಬಲ ಸೂಚಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ ಎನ್ನಬಹುದು.