ಮನೆ ರಾಜ್ಯ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವುದರಿಂದ ಸಂಪರ್ಕ ಮತ್ತು ಜ್ಞಾನ ವೃದ್ಧಿ: ಪ್ರೊ.ಕೆ.ಎಸ್.ರಂಗಪ್ಪ

ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವುದರಿಂದ ಸಂಪರ್ಕ ಮತ್ತು ಜ್ಞಾನ ವೃದ್ಧಿ: ಪ್ರೊ.ಕೆ.ಎಸ್.ರಂಗಪ್ಪ

0

ಮೈಸೂರು(Mysuru): ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವುದರಿಂದ ಉದ್ಯೋಗದ ಅವಕಾಶಗಳು ಜಾಸ್ತಿಯಾಗುತ್ತವೆ. ಸಂಪರ್ಕ ಮತ್ತು ಜ್ಞಾನ ವೃದ್ಧಿಸುತ್ತದೆ ಎಂದು ವಿಜ್ಞಾನಿ, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಕೇಂದ್ರ ಮತ್ತು ಉತ್ಕೃಷ್ಟ ಸಂಸ್ಥೆಯ ಸಹಯೋಗದಲ್ಲಿ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಫ್ರಾನ್ಸ್‌ ದೇಶದಲ್ಲಿನ ಉನ್ನತ ಶಿಕ್ಷಣ ಮತ್ತು ವೈಜ್ಞಾನಿಕ ಸಹಕಾರದಲ್ಲಿಲ್ಲಿನ ಅವಕಾಶಗಳು’ ಕುರಿತ ಉಪನ್ಯಾಸ – ಚರ್ಚೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದೇಶಗಳಲ್ಲಿನ ಪರಿಣತರೊಂದಿಗೆ ಸಹಯೋಗ ಹೊಂದದಿದ್ದರೆ ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಅಗತ್ಯವಾಗುತ್ತದೆ. ಇದರಿಂದ ಉನ್ನತ ಶಿಕ್ಷಣದಲ್ಲಿ ಸುಧಾರಣೆ ಸಾಧ್ಯವಾಗುತ್ತದೆ. ದೇಶವು ಆರ್ಥಿಕವಾಗಿ ಪ್ರಗತಿ ಗಳಿಸಲು ಆವಿಷ್ಕಾರಗಳು ನಿಯಮಿತವಾಗಿ ನಡೆಯಬೇಕು. ಇದಕ್ಕೆ ಸಹಕಾರ ಅವಶ್ಯವಾಗುತ್ತದೆ ಎಂದರು.

ಫ್ರಾನ್ಸ್‌ನಲ್ಲಿ ಶಿಕ್ಷಣ ಅಗ್ಗ:  ಬೆಂಗಳೂರಿನಲ್ಲಿರುವ ಫ್ರಾನ್ಸ್‌ ಕಾನ್ಸುಲೇಟ್‌ನ ವಿಜ್ಞಾನ ಮತ್ತು ಶೈಕ್ಷಣಿಕ ಸಹಕಾರ ಕೇಂದ್ರದ ಪ್ರತಿನಿಧಿ (ಅಟ್ಯಾಚಿ) ಫ್ರಾಂಕೋಯಿಸ್ ಮಾರ್ಟ್ರೂಯಿಲ್ ಮಾರ್ಟಿಯಲ್‌ ಮಾತನಾಡಿ, ‘ಭಾರತದಿಂದ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿನಿಯರು ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ಹೋಗುತ್ತಿದ್ದಾರೆ. ಅಂಥವರಿಗೆ ಫ್ರಾನ್ಸ್ ಉತ್ತಮ ಆಯ್ಕೆಯಾಗಿದೆ. ವೈವಿಧ್ಯಮಯ ಕೋರ್ಸ್‌ಗಳು ನಮ್ಮಲ್ಲಿ ಲಭ್ಯ ಇವೆ. ವಿನಿಮಯ ಕಾರ್ಯಕ್ರಮಗಳಿವೆ. ಬಹಳಷ್ಟು ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದ್ದು, ಅದರ ನೆರವು ಗಳಿಸಬಹುದಾಗಿದೆ. ಇತರ ದೇಶಗಳಿಗೆ ಹೋಲಿಸಿದ್ದರೆ ಫ್ರಾನ್ಸ್‌ನಲ್ಲಿ ಶಿಕ್ಷಣ ಅಗ್ಗವಿದೆ ಎಂದು ಮಾಹಿತಿ ನೀಡಿದರು.

ಫ್ರಾನ್ಸ್‌ಗೆ ಬಹಳಷ್ಟು ಮಂದಿ ಪಿಎಚ್‌.ಡಿ ಸಂಶೋಧನೆಗಾಗಿ ಬರುತ್ತಿದ್ದಾರೆ. ವಿದ್ಯಾರ್ಥಿವೇತನ ಕಾರ್ಯಕ್ರಮವಿದ್ದು, ಅದರ ಲಾಭ ಪಡೆದುಕೊಳ್ಳಬಹುದು. ಭಾರತದಲ್ಲಿ 100 ಫ್ರೆಂಚ್‌ ಕಂಪನಿಗಳಿಗೆ. ಅವುಗಳಲ್ಲಿ ಉದ್ಯೋಗದ ಅವಕಾಶಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ‍ಪ್ರೊ.ಆರ್.ಶಿವಪ್ಪ, ಬೆಂಗಳೂರಿನಲ್ಲಿರುವ ಫ್ರಾನ್ಸ್‌ ಕಾನ್ಸುಲೇಟ್‌ನ ಪ್ರತಿನಿಧಿಗಳಾದ ಡಾ.ಅಂಬಿಕಾ ಅನಿಲ್‌ಕುಮಾರ್‌, ಲ್ಯೂಸಿಲ್ಲೀ ಗ್ಯೂಲ್ಲೆಟ್, ಯಶ್ ಕಾಕರ್, ಮೈಸೂರು ವಿ.ವಿ ಅಂತರರಾಷ್ಟ್ರೀಯ ಕೇಂದ್ರದ ನಿರ್ದೇಶಕ ಡಾ.ಜಿ.ಆರ್.ಜನಾರ್ಧನ್, ವಿಜ್ಞಾನ ಭವನದ ಸಂಯೋಜಕ ಡಾ.ಎಸ್.ಚಂದ್ರನಾಯಕ್ ಇದ್ದರು.