ಮನೆ ಸಾಹಿತ್ಯ ದಸರಾ ರಂಗ ಗೌರವ ಪುರಸ್ಕಾರಕ್ಕೆ ಖ್ಯಾತ ನಾಟಕಕಾರ ನ.ರತ್ನ ಆಯ್ಕೆ

ದಸರಾ ರಂಗ ಗೌರವ ಪುರಸ್ಕಾರಕ್ಕೆ ಖ್ಯಾತ ನಾಟಕಕಾರ ನ.ರತ್ನ ಆಯ್ಕೆ

0

ಮೈಸೂರು(Mysuru): ರಂಗಾಯಣದಿಂದ ಕೊಡಮಾಡುವ 2022ನೇ ಸಾಲಿನ ‘ದಸರಾ ರಂಗಗೌರವ ಪುರಸ್ಕಾರ’ಕ್ಕೆ ಖ್ಯಾತ ನಾಟಕಕಾರ ನ.ರತ್ನ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.

ಇಂದು ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಶಸ್ತಿಯು 10 ಸಾವಿರ ರೂ. ಫಲಕವನ್ನು ಒಳಗೊಂಡಿದೆ. ರತ್ನ ಅವರು ರಂಗಭೂಮಿಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದನ್ನು ಪರಿಗಣಿಸಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದರು.

ಅ.4ರಂದು ರಂಗಾಯಣದ ಭೂಮಿಗೀತದಲ್ಲಿ ನಡೆಯುವ ದಸರಾ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‌ಕುಮಾರ್ ಭಾಗವಹಿಸಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ರಂಗಭೀಷ್ಮ ಬಿ.ವಿ.ಕಾರಂತರ ಜನ್ಮೋತ್ಸವದ ಅಂಗವಾಗಿ ಸೆ.19ರಿಂದ 23ರವರೆಗೆ ‘ಭಾರತೀಯ ರಂಗಸಂಗೀತೋತ್ಸವ’ ಹಾಗೂ ದಸರಾ ಮುನ್ನದಿನವಾದ ಸೆ.25ರಿಂದ ಅ.4ರವರೆಗೆ ದಸರ ರಂಗೋತ್ಸವ ಆಯೋಜಿಸಲಾಗಿದೆ. 10 ನಾಟಕಗಳ ಪ್ರದರ್ಶನವಿರಲಿದೆ.

ಈ ಎಲ್ಲ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿರುತ್ತದೆ’ ಎಂದು ಮಾಹಿತಿ ನೀಡಿದರು.

ಹಿಂದಿನ ಲೇಖನಯುವಕರು ಬೆಳೆದಷ್ಟು ದೇಶ ಬೆಳೆಯುತ್ತದೆ: ಇಂದರ್ ಇಕ್ಬಲ್ ಸಿಂಗ್ ಅತ್ವಲ್
ಮುಂದಿನ ಲೇಖನವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವುದರಿಂದ ಸಂಪರ್ಕ ಮತ್ತು ಜ್ಞಾನ ವೃದ್ಧಿ: ಪ್ರೊ.ಕೆ.ಎಸ್.ರಂಗಪ್ಪ