ಮನೆ ಅಪರಾಧ ನಕಲಿ ಅರವಳಿಕೆ ತಜ್ಞ ಡಾ.ಚಂದ್ರಶೇಖರ್’ಗೆ ಅರವಳಿಕೆ ಅಭ್ಯಾಸ ಮುಂದುವರೆಸದಂತೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಆದೇಶ

ನಕಲಿ ಅರವಳಿಕೆ ತಜ್ಞ ಡಾ.ಚಂದ್ರಶೇಖರ್’ಗೆ ಅರವಳಿಕೆ ಅಭ್ಯಾಸ ಮುಂದುವರೆಸದಂತೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಆದೇಶ

0

ಮೈಸೂರು:  ಅರವಳಿಕೆ ತಜ್ಞನೆಂದು ಹೇಳಿಕೊಂಡು ರೋಗಿಗಳ ಜೀವನದಲ್ಲಿ ಆಟವಾಡುತ್ತಿದ್ದ ನಕಲಿ ಅರವಳಿಕೆ ತಜ್ಞ  ಆದಿತ್ಯ ನರ್ಸಿಂಗ್ ಹೋಂ ನ ಡಾ.ಚಂದ್ರಶೇಖರ್ ಗೆ ಅರವಳಿಕೆ ಅಭ್ಯಾಸ ಮುಂದುವರೆಸದಂತೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಆದೇಶಿಸಿದೆ.

ನಗರದ ಆದಿತ್ಯ ನರ್ಸಿಂಗ್ ಹೋಂನಲ್ಲಿ ಡಾ.ಚಂದ್ರಶೇಖರ್ ಅವರು ಅರವಳಿಕೆ ತಜ್ಞತೆ ಹೊಂದಿಲ್ಲದಿದ್ದರೂ ಅರವಳಿಕೆ ತಜ್ಞ ಎಂದು ನಾಮಫಲಕ ಹಾಕಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾತ್ರವಲ್ಲದೇ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ತತ್ಸಮಾನ ವಿದ್ಯಾರ್ಹತೆ ಹೊಂದಿಲ್ಲದಿರುವ ಬಗ್ಗೆ ಆರ್’ಟಿಐ ಕಾರ್ಯಕರ್ತ ಕೆ.ರವಿ ಅವರ ದೂರಿನ ಮೇರೆಗೆ ಸೂಕ್ತ ತನಿಖೆ ನಡೆಸಿದಾಗ ವೈದ್ಯರ ಹಾಗೂ ಸಿಬ್ಬಂದಿಗಳ ನ್ಯೂನತೆ ಸಾಬೀತಾಗಿದೆ.

ಅರವಳಿಕೆ ವಿದ್ಯಾರ್ಹತೆ ಹೊಂದದೆ ರೋಗಿಗಳಿಗೆ ಚುಚ್ಚುಮದ್ದು ನೀಡಿರುವುದು ಅಪರಾಧವಾಗಿದೆ. ಅಲ್ಲದೇ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಡಾ.ಚಂದ್ರಶೇಖರ್ ಅವರು ಅರವಳಿಕೆ ವಿದ್ಯಾರ್ಹತೆ ಪಡೆದಿಲ್ಲವೆಂದು ಉಲ್ಲೇಖಿಸಿದೆ. ಈ ಸಂಬಂಧ ಕೆಪಿಎಂಇ ಕಾಯ್ದೆಯಡಿ ಡಾ.ಚಂದ್ರಶೇಖರ್ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಿಗೆ ಸೂಚಿಸಲಾಗಿತ್ತು.

ಈ ಕುರಿತು ಡಾ.ಚಂದ್ರಶೇಖರ್ ಮೇಲ್ಮನವಿ ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಮೇಲ್ಮನವಿ ಪ್ರಾಧಿಕಾರವು ಆದಿತ್ಯ ನರ್ಸಿಂಗ್ ಹೋಂ ನಲ್ಲಿ ಅರವಳಿಕೆ ವೈದ್ಯಕೀಯ ವೃತ್ತಿಯನ್ನು ಮಾಡುವಂತಿಲ್ಲ. ಒಂದು ವೇಳೆ ಅದನ್ನು ಮುಂದುವರೆಸಿದರೆ ವೈದ್ಯಕೀಯ ವೃತ್ತಿಗೆ ಸಂಬಂಧಪಟ್ಟ ನೋಂದಣಿಯನ್ನು ರದ್ದುಪಡಿಸಲು ಕರ್ನಾಟಕ ವೈದ್ಯಕೀಯ ಮಂಡಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು 2019ರಲ್ಲಿಯೇ ಆದೇಶಿಸಲಾಗಿತ್ತು.

ಆದಿತ್ಯ ನರ್ಸಿಂಗ್ ಹೋಂನ ಡಾ.ಚಂದ್ರಶೇಖರ್ ಅವರು ಕೆಪಿಎಂಇ ಅಧಿನಿಯಮ ಹಾಗೂ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಪ್ರಕಾರ  ಅರವಳಿಕೆ ಅಭ್ಯಾಸ ಮುಂದುವರೆಸದಂತೆ ಆದೇಶಿಸಲಾಗಿದೆ.

ಆಸ್ಪತ್ರೆಯ ಸಿಬ್ಬಂದಿಗಳಾದ ದಿನೇಶ್.ಬಿ.ಎಸ್ ಶುಶ್ರೂಷಕನಾಗಿದ್ದು, ಆಸ್ಪತ್ರೆಯಲ್ಲಿ ನಕಲಿ ವೈದ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ ಹಾಗೂ ಗಣೇಶ್.ಎಸ್. ತಕ್ಕ ವಿದ್ಯಾಭ್ಯಾಸ ಇಲ್ಲದೇ ಸಿಬ್ಬಂದಿ ಹುದ್ದೆ ಹೊಂದಿದ್ದು, ಇವರ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಹಾಗೂ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಅಧ್ಯಕ್ಷರಿಗೆ ಸೂಚಿಸಲಾಗಿದೆ.