ಮನೆ ಅಪರಾಧ ದೇವನಹಳ್ಳಿ: ಬಾಲಕಿ ಮೇಲೆ ಅತ್ಯಾಚಾರ- ದೂರು ದಾಖಲು

ದೇವನಹಳ್ಳಿ: ಬಾಲಕಿ ಮೇಲೆ ಅತ್ಯಾಚಾರ- ದೂರು ದಾಖಲು

0

ದೇವನಹಳ್ಳಿ(Devanahalli): ತಾಲ್ಲೂಕಿನ 11 ವರ್ಷದ ಬಾಲಕಿ ಮೇಲೆ 36 ವರ್ಷದ ಯುವಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ.

ಬಾಲಕಿಯೂ ಸಂಜೆ ಟ್ಯೂಷನ್‌ಗೆ ಹೋಗಿದ್ದಾಗ ಆರೋಪಿಯು, ಆಕೆಯ ತಂದೆಯನ್ನು ಕೋವಿಡ್ ಕಾರಣದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತ್ವರಿತವಾಗಿ ಕಳುಹಿಸಿಕೊಡಿ ಎಂದು ತಿಳಿಸಿ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಾಲಕಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ವಿಶ್ವನಾಥಪುರ ಪೊಲೀಸ್ ಠಾಣೆಗೆ ಸಂತ್ರಸ್ತೆಯ ಪೋಷಕರು ನೀಡಿದ ದೂರಿನ ಮೇರೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಮೈಸೂರಿನ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಘಟಕದಲ್ಲಿದೆ ಉದ್ಯೋಗಾವಕಾಶ
ಮುಂದಿನ ಲೇಖನನಕಲಿ ಅರವಳಿಕೆ ತಜ್ಞ ಡಾ.ಚಂದ್ರಶೇಖರ್’ಗೆ ಅರವಳಿಕೆ ಅಭ್ಯಾಸ ಮುಂದುವರೆಸದಂತೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಆದೇಶ