ಮನೆ ತಂತ್ರಜ್ಞಾನ ಶೀಘ್ರದಲ್ಲೇ ಬರಲಿದೆ ಟಾಟಾ ಟಿಯಾಗೋ ಇವಿ

ಶೀಘ್ರದಲ್ಲೇ ಬರಲಿದೆ ಟಾಟಾ ಟಿಯಾಗೋ ಇವಿ

0

ಭಾರತದ ಪ್ರಸಿದ್ಧ ಕಾರು ತಯಾರಕ ಟಾಟಾ ಕಂಪನಿಯು ತನ್ನ ಟಿಯಾಗೋ ಕಾರಿನ ಎಲೆಕ್ಟ್ರಿಕ್‌ ಅವತರಣಿಕೆಯನ್ನು ಶೀಘ್ರದಲ್ಲೇ ಹೊರತರಲು ಸಿದ್ಧಗೊಂಡಿದೆ. 2022ರ ಇವಿ ದಿನದ ಆಚರಣೆಯ ಸಂದರ್ಭದಲ್ಲಿ ಕಂಪನಿಯ ಹೊಸ ಎಲೆಕ್ಟ್ರಿಕ್ ಕಾರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ಕಂಪನಿಯು ಬಹಿರಂಗ ಪಡಿಸಿದೆ.

ಟಾಟಾದ ಈ ಟಿಯಾಗೋ ಇವಿಯು ಕೈಗೆಟಕುವ ದರದಲ್ಲಿ ಜನತೆಗೆ ಲಭ್ಯವಾಗಲಿದೆ. ಕೆಲ ವರದಿಗಳ ಪ್ರಕಾರ ಇದು ದೇಶದ ಇವಿ ಕಾರುಗಳಲ್ಲೇ ಅತ್ಯಂತ ಅಗ್ಗದ್ದಾಗಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಖಚಿತವಾದ ಮಾಹಿತಿಯು ಬಿಡುಗಡೆಯ ಸಂದರ್ಭದಲ್ಲೇ ತಿಳಿಯಲಿದೆ.

“ಇಂದು ನಮಗೆ ಮಹತ್ವದ ಸಂದರ್ಭವಾಗಿದೆ. ಟಾಟಾ ಟಿಯಾಗೋ ಇವಿಯ ಮೂಲಕ ನಮ್ಮ ಇವಿ ವಿಭಾಗವನ್ನು ಮಾರುಕಟ್ಟೆಯಲ್ಲಿ ಮತ್ತಷ್ಟು ವಿಸ್ತರಿಸುತ್ತಿದ್ದೇವೆ” ಎಂದು ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನಗಳ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಹೇಳಿದ್ದಾರೆ.

Tiago EV Tiago ICE ಹ್ಯಾಚ್‌ಬ್ಯಾಕ್ ವಿನ್ಯಾಸವನ್ನು ಹೊಂದಿದ್ದು ಇದು ಪ್ರಸ್ತುತ ಪೆಟ್ರೋಲ್‌ ಮತ್ತು ಸಿಎನ್‌ಜಿ ಇಂಧನ ರೂಪಾಂತರಗಳಲ್ಲಿ ಲಭ್ಯವಿದೆ ಈ ಕಾರನ್ನು 2018 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಪ್ರಸ್ತುತ 14 ವಿಭಿನ್ನ ರೂಪಗಳಲ್ಲಿ ಇದು ಲಭ್ಯವಿದೆ.

ಕಳೆದ ಎರಡು ವರ್ಗಳಲ್ಲಿ ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು ಏರುತ್ತಿರುವ ಇಂದನ ಬೆಲೆಗಳು ಇವಿ ವಾಹನಗಳ ಮಾರಾಟವನ್ನು ಹೆಚ್ಚಿಸಿದೆ. ಟಿಯಾಗೋ ಇವಿಯು ಪ್ರಸ್ತುತ ಎಲೆಕ್ಟ್ರಿಕ್‌ ಕಾರುಗಳ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆ ಸೃಷ್ಟಿಸಲಿದೆ ಎನ್ನಲಾಗುತ್ತಿದೆ.

ಕೆಲ ವದಂತಿಗಳ ಪ್ರಕಾರ ಟಾಟಾ ಟಿಯಾಗೊ ಇವಿ 41 ಎಚ್‌ಪಿ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದೆ ಎನ್ನಲಾಗುತ್ತಿದೆ. ಇದು 16.5kWh ಬ್ಯಾಟರಿ ಪ್ಯಾಕ್‌ನಿಂದ ಬೆಂಬಲಿತವಾಗಿದ್ದು 165km ವ್ಯಾಪ್ತಿಯನ್ನು ಹೊಂದಿದೆ. ಇದಲ್ಲದೇ 21.5kWh ಸಾಮರ್ಥ್ಯದ 213km ವ್ಯಾಪ್ತಿಹೊಂದಿರುವ ರೂಪಾಂತರವನ್ನು ನಾವು ನೋಡಬಹುದು ಎಂದು ವದಂತಿಗಳು ಹರಿದಾಡುತ್ತಿವೆ.