ಮನೆ ಆರೋಗ್ಯ ಸಕ್ಕರೆ ಕಾಯಿಲೆಯಿಂದ ಹೊರಬರಲು ಬೆಂಡೆಕಾಯಿ  ಸೇವಿಸಿ

ಸಕ್ಕರೆ ಕಾಯಿಲೆಯಿಂದ ಹೊರಬರಲು ಬೆಂಡೆಕಾಯಿ  ಸೇವಿಸಿ

0

ಬೆಂಡೆಕಾಯಿ ಲೋಳೆ, ಅದನ್ನು ತಿನ್ನುವುದಿಲ್ಲ ಎಂದು ಮೂಗು ಮುರಿಯುವವರು ಸ್ವಲ್ಪ ಇಲ್ಲಿ ಕೇಳಬೇಕು. ಏಕೆಂದರೆ, ನಿಮ್ಮ ಮನೆಯಲ್ಲಿ ಒಂದು ವೇಳೆ ಯಾರಾದರೂ ಸಕ್ಕರೆ ಕಾಯಿಲೆ ಇರುವ ವರು ಇದ್ದರೆ, ಅಂತಹವರಿಗೆ ಈ ಲೇಖನ ನೆರವಾಗಬಹುದು.

ವಿಟಮಿನ್ ಬಿ ಇದೆ

ಬೆಂಡೆಕಾಯಿಯಲ್ಲಿ ನಮ್ಮ ದೇಹಕ್ಕೆ ಬೇಕು ಎನಿಸುವಂತಹ ಬಹುತೇಕ ಪೌಷ್ಟಿಕ ಸತ್ವಗಳು ಸಿಗುತ್ತವೆ. ಅವುಗಳಲ್ಲಿ ವಿಟಮಿನ್ ಬಿ6 ಸಹ ಒಂದು. ಇದರ ಜೊತೆಗೆ ಕಬ್ಬಿಣದ ಅಂಶ ಮತ್ತು ನಾರಿನ ಪ್ರಮಾಣ ಕೂಡ ಇರುವುದರಿಂದ ನ್ಯೂರೋಪತಿ ಹೆಚ್ಚಾಗುವ ಸಾಧ್ಯತೆಯನ್ನು ತಡೆಯುತ್ತದೆ ಜೊತೆಗೆ ಹೋಮೊಸಿಸ್ಟೀನೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರ ಕಾರಣದಿಂದ ಮಧುಮೇಹ ಕಂಟ್ರೋಲ್ ನಲ್ಲಿ ಉಳಿಯುತ್ತದೆ ಎಂದು ಹೇಳಬಹುದು.

ಗ್ಲೈಸೆಮಿಕ್ ಸೂಚ್ಯಂಕದ ರಹಸ್ಯ

• ಬೆಂಡೆಕಾಯಿಯಲ್ಲಿ ಗ್ಲೈಸೆಮಿಕ್ ಸೂಚ್ಯಂಕ ತುಂಬಾ ಕಡಿಮೆ ಇದೆ ಎಂದು ಹೇಳುತ್ತಾರೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಬೇರೆ ಬೇರೆ ಆಹಾರ ಪದಾರ್ಥಗಳು ಯಾವ ರೀತಿ ಪ್ರಭಾವ ಬೀರಿ ಹೆಚ್ಚು ಕಡಿಮೆ ಮಾಡುತ್ತವೆ ಎಂಬುದನ್ನು ತಿಳಿಸುವ ಒಂದು ಸಂಖ್ಯೆ ಎಂದರೆ ಅದು ಗ್ಲೈಸೆಮಿಕ್ ಸೂಚ್ಯಂಕ ಆಗಿದೆ.

• ಯಾವ ಆಹಾರ ಪದಾರ್ಥಗಳಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುತ್ತದೆ ಅಂತಹವುಗಳು ಮಧುಮೇಹಿಗಳಿಗೆ ಆರೋಗ್ಯಕರ ಎಂದು ತಿಳಿಯಲಾಗಿದೆ. ಬೆಂಡೆಕಾಯಿಯನ್ನು ಈ ವಿಚಾರದಲ್ಲಿ ನಂಬಬಹುದು.

ನಾರಿನಾಂಶ ನೋಡುವುದಾದರೆ…

• ಬೆಂಡೆಕಾಯಿಯಲ್ಲಿ ಕರಗುವ ಮತ್ತು ಕರಗದೆ ಇರುವ ಎರಡು ಪ್ರಮಾಣದ ನಾರಿನ ಅಂಶಗಳು ಇವೆ. ಅಂದರೆ ರಕ್ತಕ್ಕೆ ಸಕ್ಕರೆ ಪ್ರಮಾಣ ಬಿಡುಗಡೆಯಾಗಲು ನಾರಿನ ಅಂಶ ಸ್ವಲ್ಪ ಹೆಚ್ಚಿಗೆ ಸಮಯ ತೆಗೆದುಕೊಂಡು ಬಿಡುಗಡೆ ಮಾಡುತ್ತದೆ.

• ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಇದ್ದಕ್ಕಿದ್ದಂತೆ ಏರಿಕೆ ಕಾಣುವುದಿಲ್ಲ. ನೀವು ನಾರಿನ ಅಂಶ ಹೆಚ್ಚಾಗಿರುವ ಯಾವುದೇ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ಪಡೆದುಕೊಳ್ಳಬಹುದು.

• ಅಂದರೆ ಹೊಟ್ಟೆ ಹಸಿವು ಆಗುವುದಿಲ್ಲ. ಜೊತೆಗೆ ಇನ್ಸುಲಿನ್ ಸಂಬಂಧಿತ ತೊಂದರೆಗಳು ಸಹ ಇರುವುದಿಲ್ಲ. ಇದರಿಂದ ಸುಲಭವಾಗಿ ತೂಕ ನಿಯಂತ್ರಣ ಸಹ ಮಾಡಿಕೊಳ್ಳಬಹುದು.

ಕ್ಯಾಲೋರಿಗಳು ಕಡಿಮೆ ಇವೆ

• 100ಗ್ರಾಂ ಬೆಂಡೆಕಾಯಿ ತನ್ನಲ್ಲಿ 33 ಕ್ಯಾಲೊರಿಗಳನ್ನು ಒಳಗೊಂಡಿದೆ. ಇದರಿಂದ ನೀವು ನಿಮ್ಮ ದೇಹದ ತೂಕದ ಬಗ್ಗೆ ಯಾವುದೇ ರೀತಿಯ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಆರೋಗ್ಯಕರವಾದ ತೂಕ ನಿರ್ವಹಣೆಯಲ್ಲಿ ಕೂಡ ಇದು ನೆರವಾಗುತ್ತದೆ.

• ನಿಯಮಿತವಾಗಿ ಆಗಾಗ ಬೆಂಡೆಕಾಯಿಗಳನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಬೊಜ್ಜು ನಿಯಂತ್ರಣಕ್ಕೆ ಬರುತ್ತದೆ ಮತ್ತು ಇದರಿಂದ ಮಧುಮೇಹ ಸಹ ಕಂಟ್ರೋಲ್ ಆಗುತ್ತದೆ.

ಪೌಷ್ಟಿಕ ಸತ್ವಗಳು- ಒಂದು ವರದಾನ

• ಬೆಂಡೆಕಾಯಿಯಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಸಾಕಷ್ಟಿವೆ. ಇವುಗಳ ಜೊತೆಗೆ ಫೋಲೇಟ್, ಬೀಟಾ-ಕ್ಯಾರೋಟಿನ್ ಮತ್ತು ಲೂಟನ್ ಸಹ ಇದೆ.

• ಇವುಗಳೆಲ್ಲವೂ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳನ್ನು ಹೊಂದಿರುವುದರಿಂದ ನಿಮ್ಮ ಆಹಾರ ಪದ್ಧತಿಗೆ ಬೆಂಡೆಕಾಯಿಗಿಂತ ಬೆಸ್ಟ್ ಚಾಯ್ಸ್ ಮತ್ತೊಂದಿಲ್ಲ ಎನಿಸುತ್ತದೆ. ಆರೋಗ್ಯಕರವಾದ ರೀತಿಯಲ್ಲಿ ಸಕ್ಕರೆ ಕಾಯಿಲೆ ಇರುವವರು ಬೆಂಡೆಕಾಯಿಯನ್ನು ಸೇವಿಸಿ ಸಕ್ಕರೆ ಕಾಯಿಲೆ ನಿಯಂತ್ರಣ ಮಾಡಿಕೊಳ್ಳಬಹುದು.

ಬೆಂಡೆಕಾಯಿಯ ಇತರ ಆರೋಗ್ಯ ಪ್ರಯೋಜನಗಳು

• ಬೆಂಡೆಕಾಯಿ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣಕ್ಕೆ ತರುವುದು ಮಾತ್ರವಲ್ಲದೆ ಸಾಕಷ್ಟು ಬಗೆಯ ಬೇರೆಬೇರೆ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಅವುಗಳ ಬಗ್ಗೆ ತಿಳಿದುಕೊಳ್ಳುವುದಾದರೆ,

• ಬೆಂಡೆಕಾಯಿ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಏಕೆಂದರೆ ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುತ್ತದೆ. ರಕ್ತದ ಒತ್ತಡ ಇರುವವರಿಗೆ ಇದು ಬಹಳ ಪ್ರಯೋಜನಕಾರಿ ಎಂದು ಹೇಳಬಹುದು.

• ಅಷ್ಟೇ ಅಲ್ಲದೆ ವಿಟಮಿನ್ ಸಿ ಪ್ರಮಾಣ ಇದರಲ್ಲಿ ಇರುವುದರಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಇದರಿಂದ ಸೋಂಕುಗಳಿಂದ ದೂರ ಉಳಿಯಲು ಸಾಧ್ಯವಾಗುತ್ತದೆ.

• ಗರ್ಭಿಣಿ ಮಹಿಳೆಯರಿಗೆ ಬೆಂಡೆಕಾಯಿ ತುಂಬಾ ಪ್ರಯೋಜನಕಾರಿ. ಏಕೆಂದರೆ ಅವರ ದೇಹಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್ ಏ ವಿಟಮಿನ್ ಬಿ ಮತ್ತು ವಿಟಮಿನ್-ಸಿ ಬೆಂಡೆಕಾಯಿಯಲ್ಲಿ ಹೇರಳವಾಗಿ ಸಿಗುತ್ತದೆ.

ಮೂಳೆಗಳ ಆರೋಗ್ಯಕ್ಕೆ

ಮೂಳೆಗಳ ಆರೋಗ್ಯವನ್ನು ವೃದ್ಧಿಸುವ ವಿಟಮಿನ್ ಕೆ ಪ್ರಮಾಣ ಬೆಂಡೆಕಾಯಿಯಲ್ಲಿ ಬಹಳ ಹೆಚ್ಚಾಗಿ ಕಂಡುಬರುತ್ತದೆ. ಅಷ್ಟಲ್ಲದೇ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ಸಹ ಇದು ತಪ್ಪಿಸುತ್ತದೆ.

ಕಣ್ಣುಗಳ ಆರೋಗ್ಯಕ್ಕೆ

• ಕಣ್ಣುಗಳ ಆರೋಗ್ಯಕ್ಕೆ ಬೆಂಡೆಕಾಯಿ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಏಕೆಂದರೆ ಬೆಂಡೆಕಾಯಿಯಲ್ಲಿ lutein, zeaxanthin, ಮತ್ತು meso-zeaxanthin ಎಂಬ 3 ಕ್ಯಾರೋಟಿನ್ ಪ್ರಮಾಣ ಇದೆ. ಇವುಗಳಿಂದ ವಯೋವೃದ್ಧರಿಗೆ ತಮ್ಮ ಇಳಿವಯಸ್ಸಿನ ಕಾಲದಲ್ಲಿ ಕಂಡುಬರುವ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಎಂದು ತಿಳಿಯಲಾಗಿದೆ. ಆದರೆ ನಿಯಮಿತವಾಗಿ ಬೆಂಡೆಕಾಯಿಯನ್ನು ಸೇವನೆ ಮಾಡಬೇಕು.

• ತ್ವಚೆಯ ಜೀವಕೋಶಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ರಿಪೇರಿ ಮಾಡುವಲ್ಲಿ ಬೆಂಡೆಕಾಯಿಯಲ್ಲಿ ಸಿಗುವಂತಹ ಕ್ಯಾರೋಟಿನ್ ಪ್ರಮಾಣ ಕೆಲಸ ಮಾಡುತ್ತದೆ. ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮದ ಮೇಲೆ ಉಂಟಾದ ಹಾನಿಯನ್ನು ಬೆಂಡೆಕಾಯಿ ಸರಿಪಡಿಸಿ ಆರೋಗ್ಯಕರವಾದ ಮತ್ತು ಹೊಳಪಿನ ಚರ್ಮ ನಿಮ್ಮದಾಗುವ ಹಾಗೆ ಮಾಡುತ್ತದೆ.