ಮನೆ ಜ್ಯೋತಿಷ್ಯ ಹಣದ ಸಮಸ್ಯೆ: ಈ ಗಿಡ ಮನೆಯಲ್ಲಿ ನೆಟ್ಟರೆ ಪರಿಹಾರ

ಹಣದ ಸಮಸ್ಯೆ: ಈ ಗಿಡ ಮನೆಯಲ್ಲಿ ನೆಟ್ಟರೆ ಪರಿಹಾರ

0

ವಾಸ್ತು ಶಾಸ್ತ್ರದಲ್ಲಿ, ಶಮಿಯ ಸಸ್ಯವನ್ನು ಅತ್ಯಂತ ಅದ್ಭುತವೆಂದು ಪರಿಗಣಿಸಲಾಗಿದೆ. ಈ ಗಿಡವನ್ನು ಮನೆಯಲ್ಲಿ ನೆಟ್ಟರೆ ಧನ-ಧಾನ್ಯಗಳ ಕೊರತೆಯಾಗುವುದಿಲ್ಲ ಎಂಬ ಪ್ರತೀತಿ ಇದೆ. ಈ ಸಸ್ಯವು ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.

ಶಮಿ ಸಸ್ಯವನ್ನು ಶನಿಗ್ರಹಕ್ಕೆ ಪ್ರಿಯವಾದದ್ದು ಎಂದು ಪರಿಗಣಿಸಲಾಗಿದೆ. ಈ ಸಸ್ಯವನ್ನು ಪ್ರತಿನಿತ್ಯ ಪೂಜಿಸುವುದರಿಂದ ಶನಿಯ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತದೆ. ಈ ಗಿಡ ಮನೆಯಲ್ಲಿರುವುದರಿಂದ ವಾಸ್ತುದೋಷವಿರುವುದಿಲ್ಲ.

ಈ ಸಸ್ಯವನ್ನು ನೆಡಲು ಶನಿವಾರವನ್ನು ಮಂಗಳಕರ ದಿನ ಎಂದು ಪರಿಗಣಿಸಲಾಗುತ್ತದೆ. ಇದನ್ನು ಮಡಕೆಗಳಲ್ಲಿ ಅಥವಾ ನೇರವಾಗಿ ನೆಲದಲ್ಲಿ ನೆಡಬಹುದು. ವಿಜಯದಶಮಿಯ ದಿನದಂದು ಈ ಗಿಡವನ್ನು ನೆಡುವುದರಿಂದ ಉತ್ತಮ ಫಲ ಕಾಣಬಹುದು. ಇದನ್ನು ಮನೆಯ ಮುಖ್ಯ ಬಾಗಿಲು ಅಥವಾ ಛಾವಣಿಯ ಮೇಲೆ ಇಡಿ

ಮನೆಯ ಹೊರಗೆ ಈ ಗಿಡವನ್ನು ನೆಡಲು ಸ್ಥಳವಿಲ್ಲದಿದ್ದರೆ, ಆ ಸಂದರ್ಭದಲ್ಲಿ ನೀವು ದಕ್ಷಿಣಕ್ಕೆ ಎದುರಾಗಿರುವ ಛಾವಣಿಯ ಮೇಲೆ ಇಡಬೇಕು. ಸೂರ್ಯನ ಬೆಳಕು ಈ ದಿಕ್ಕಿನಲ್ಲಿ ಬಾರದಿದ್ದರೆ, ಅದನ್ನು ಪೂರ್ವ ದಿಕ್ಕಿನಲ್ಲಿ ಅಥವಾ ಈಶಾನ್ಯ ಕೋನದಲ್ಲಿ ಇರಿಸಬಹುದು.

ಈ ಗಿಡಗಳನ್ನು ಎಲ್ಲೆಲ್ಲಿ ನೆಡಲಾಗುತ್ತದೋ, ಅದರ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇರಿಸಿಕೊಳ್ಳಿ. ಈ ಮರವನ್ನು ಪೂಜಿಸುವುದರಿಂದ ಇದರ ಸುತ್ತಲಿನ ಪರಿಸರ ಶುಚಿಯಾಗಿರಬೇಕು. ಆದ್ದರಿಂದ ಇದನ್ನು ಶುದ್ಧ ಮಣ್ಣಿನಲ್ಲಿ ನೆಟ್ಟು ಶುಚಿತ್ವ ಕಾಪಾಡಿ

ಶಮಿ ಗಿಡಕ್ಕೆ ಪ್ರತಿನಿತ್ಯ ಪೂಜಿಸಿ ನೀರುಣಿಸಿದರೆ ಹಣದ ಕೊರತೆಯಾಗದು ಎಂಬ ನಂಬಿಕೆ ಇದೆ. ಶನಿವಾರದಂದು ಈ ಗಿಡವನ್ನು ತಪ್ಪದೇ ಪೂಜಿಸಬೇಕು.

ಹಿಂದಿನ ಲೇಖನಏಷ್ಯಾ ಲಯನ್ಸ್ ನ ಬೇಟೆಯಾಡಿದ ಇಂಡಿಯಾ
ಮುಂದಿನ ಲೇಖನಟಿ – 20 ವಿಶ್ವಕಪ್ನ ವೇಳಾಪಟ್ಟಿ ಬಹಿರಂಗ