ಮನೆ ಅಂತಾರಾಷ್ಟ್ರೀಯ ಇಂದು ರಾಣಿ ಎಲಿಜಬೆತ್-2 ಅಂತ್ಯಕ್ರಿಯೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ

ಇಂದು ರಾಣಿ ಎಲಿಜಬೆತ್-2 ಅಂತ್ಯಕ್ರಿಯೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ

0

ಲಂಡನ್‌(London): ಇಂದು ರಾಣಿ ಎಲಿಜಬೆತ್‌ 2 ಅವರ ಅಂತ್ಯಕ್ರಿಯೆ ನಡೆಯಲಿದ್ದು, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಪಾಲ್ಗೊಳ್ಳಲಿದ್ದಾರೆ.

ಮೂರು ದಿನದ  ಭೇಟಿಗಾಗಿ ಲಂಡನ್’ಗೆ  ಆಗಮಿಸಿರುವ ಅವರು ಭಾನುವಾರ ತಡರಾತ್ರ ಬ್ರಿಟನ್‌ ನೂತನ ರಾಜ 3ನೇ ಚಾರ್ಲ್ಸ್‌ ಅವರನ್ನು ಬಂಕಿಂಗ್‌ಹ್ಯಾಮ್‌ ಅರಮನೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಇಂದು ಬ್ರಿಟನ್‌ ಸ್ಥಳೀಯ ಕಾಲಮಾನ ಬೆಳಿಗ್ಗೆ 11ಕ್ಕೆ ರಾಣಿ ಎಲಿಜಬೆತ್‌ 2 ಅವರ ಅಂತ್ಯಕ್ರಿಯೆ ವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ನಡೆಯಲಿದೆ. ಭಾರತ ಸರ್ಕಾರದ ಪರವಾಗಿ ರಾಷ್ಟ್ರಪತಿ ಅವರು ಗೌರವ ನಮನ ಸಲ್ಲಿಸಲಿದ್ದಾರೆ.

 ರಾಣಿ ಎಲಿಜಬೆತ್‌ 2 ನಿಧನದ ಬಳಿಕ ಸೆಪ್ಟೆಂಬರ್‌ 10ರಂದು ಇಲ್ಲಿನ ಸೇಂಟ್‌ ಜೇಮ್ಸ್‌ ಅರಮನೆಯಲ್ಲಿ ನೂತನ ರಾಜರಾಗಿ 3ನೇ ಚಾರ್ಲ್ಸ್‌ ಪದಗ್ರಹಣ ಮಾಡಿದರು.