ಮನೆ ಆರೋಗ್ಯ ಬೀಟ್ರೂಟ್ ಸಕತ್ ಆರೋಗ್ಯಕಾರಿ ತರಕಾರಿ

ಬೀಟ್ರೂಟ್ ಸಕತ್ ಆರೋಗ್ಯಕಾರಿ ತರಕಾರಿ

0

ನಮಗೆಲ್ಲಾ ಗೊತ್ತೇ ಇರುವ ಹಾಗೆ, ಹಣ್ಣು ಹಾಗೂ ತರಕಾರಿಗಳಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಕೂಡ ನೈಸರ್ಗಿಕವಾಗಿ ಸಿಗುವುದು. ಹೀಗಾಗಿ ನಾವು ಇಂತಹ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಂಡು ಹೋಗುತ್ತೇವೆ.

ಕೆಲವು ತರಕಾರಿಗಳಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು, ಪ್ರೋಟೀನ್, ನಾರಿನಾಂಶ, ಖನಿಜಾಂಶಗಳು ಹೀಗೆ ಹಲವು ಬಗೆಯ ಪೌಷ್ಟಿಕ ಸತ್ವಗಳು ಕಂಡು ಬರುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ನಮ್ಮ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಕೂಡ ತರಕಾರಿಯಿಂದ ಸಿಗುವುದು. ಇಂತಹ ತರಕಾರಿಯಲ್ಲಿ ಬೀಟ್ ರೂಟ್ ಕೂಡ ಒಂದು.

ಬೀಟ್ರೂಟ್ನಲ್ಲಿ ಸಿಗುವ ಆರೋಗ್ಯ ಪ್ರಯೋಜನಗಳು

• ಆಧುನಿಕ ಜೀವನದಲ್ಲಿ ಅತಿಯಾದ ಒತ್ತಡದಿಂದ ಕಾಡುವಂತಹ ಪ್ರಮುಖ ಸಮಸ್ಯೆಯೆಂದರೆ ಅದು ಅಧಿಕ ರಕ್ತದೊತ್ತಡ. ಒಂದು ವೇಳೆ ಈ ಕಾಯಿಲೆ ಸರಿಯಾಗಿ ಚಿಕಿತ್ಸೆ ಹಾಗೂ ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ಹೋಗದೇ ಇದ್ದರೆ, ಮುಂದಿನ ದಿನಗಳಲ್ಲಿ ಇದರಿಂದಾಗಿ ಹೃದಯಕ್ಕೆ ಸಮಸ್ಯೆ ಬರುವ ಅಪಾಯ ಹೆಚ್ಚಿರುತ್ತದೆ.

• ಇನ್ನು ಪೌಷ್ಟಿಕ ತಜ್ಞೆ ಲೊವ್ನೀತ್ ಬಾತ್ರಾ ಅವರು ಹೇಳುವ ಪ್ರಕಾರ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬೇಕು ಎಂದರೆ, ಆಹಾರಕ್ರಮದಲ್ಲಿ ಬೀಟ್ ರೂಟ್ ಸೇರಿಸಬೇಕು, ಇಲ್ಲಾಂದ್ರೆ ಈ ತರಕಾರಿಯಿಂದ ಮಾಡಿದ ಜ್ಯೂಸ್ ನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕಂತೆ.

• ಇದಕ್ಕೆ ಮುಖ್ಯ ಕಾರಣ ಬೀಟ್ರೂಟ್‪ನಲ್ಲಿ ನೈಸರ್ಗಿಕ ರಾಸಾಯನಿಕವಾಗಿರುವ ನೈಟ್ರೇಟ್ ಅಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದು ಕೆಲವೊಂದು ಪ್ರತಿಕ್ರಿಯೆಯಿಂದಾಗಿ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆ ಆಗುವುದು. ಇದರಿಂದಾಗಿ ದೇಹದಲ್ಲಿ ರಕ್ತದ ಪರಿಚಲನೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಲು ನೆರವಾಗುವುದು ಹಾಗೂ ರಕ್ತದೊತ್ತಡದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

ಉರಿಯೂತ ಸಮಸ್ಯೆಗಳು

• ಸಾಮಾನ್ಯವಾಗಿ ಮನುಷ್ಯನಿಗೆ ಉರಿಯೂತ ಸಮಸ್ಯೆಗಳು ದೀರ್ಘಕಾಲದ ವರೆಗೆ ಕಾಡುವುದ ರಿಂದ ಆತನ ಆರೋಗ್ಯ ವ್ಯವಸ್ಥೆ ಹದಗೆಡುತ್ತಾ ಹೋಗುತ್ತದೆ. ಇಂತಹ ಸಮಸ್ಯೆಗಳು ಯಾವುದೇ ಬಗೆಯ ಕಣ್ಣಿಗೆ ಕಾಣುವಂತಹ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ.

• ಹೀಗಾಗಿ ಕೆಲವೊಮ್ಮೆ ಈ ಉರಿಯೂತ ಸಮಸ್ಯೆಗಳನ್ನು ಕಂಡು ಹಿಡಿಯಲು ವೈದ್ಯರಿಗೂ ಕೂಡ ಬಹಳಷ್ಟು ಕಷ್ಟ ವಾಗುತ್ತದೆ. ಒಂದು ವೇಳೆ ನಿಮಗೂ, ಇಂತಹ ಕೂಡ ಉರಿಯೂತ ಸಮಸ್ಯೆಗಳು ಪದೇ ಪದೇ ಕಾಡುತ್ತಿದ್ದರೆ, ತಮ್ಮ ದೈನಂದಿನ ಆಹಾರ ಕ್ರಮದಲ್ಲಿ ಬೀಟ್ರೂಟ್ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಪೌಷ್ಟಿಕ ತಜ್ಞೆ ಲೊವ್ನೀತ್ ಬಾತ್ರಾ ಅವರು ಸಲಹೆಗಳನ್ನು ನೀಡುತ್ತಾರೆ.

• ಯಾಕೆಂದರೆ ಈ ತರಕಾರಿಯಲ್ಲಿ ಕಂಡು ಬರುವ ನೈಸರ್ಗಿಕ ರಾಸಾಯನಿಕವಾಗಿರುವ ಬೀಟಾಲೈನ್ಸ್ ಮತ್ತು ನೈಟ್ರೇಟ್ ಅಂಶಗಳು ಉರಿಯೂತಕ್ಕೆ ಕಾರಣವಾಗಿರುವ ಫ್ರೀ ರ್ಯಾಡಿಕಲ್ಸ್ ವಿರುದ್ಧ ಹೋರಾಡು ವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಸಕ್ಕರೆ ಕಾಯಿಲೆ ಇರುವ ರೋಗಿಗಳಿಗೆ

• ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಇರುವ ರೋಗಿಗಳ ಮನಸ್ಸಿನಲ್ಲಿ ಒಂದು ಭಾವನೆ ಭದ್ರವಾಗಿ ಬೇರೂರಿದೆ. ಅದೇನೆಂದರೆ, ತನ್ನಲ್ಲಿ ನೈಸರ್ಗಿಕ ಸಿಹಿ ಅಂಶ ಹೊಂದಿರುವ ಬೀಟ್ರೂಟ್ ಸೇವನೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆಯಾಗಿ, ಮಧುಮೇಹ ಕಾಯಿಲೆ ನಿಯಂತ್ರಣ ಮೀರಿ ಹೋಗುತ್ತದೆ ಎಂದು ಅಂದುಕೊಂಡಿರುತ್ತಾರೆ.

• ಹೀಗಾಗಿ ಇಂತಹ ತರಕಾರಿಗಳಿಂದ ಆದಷ್ಟು ದೂರ ಇರಲು ಬಯಸುತ್ತಾರೆ. ಆದರೆ ನಿಯಮಿತವಾಗಿ ಬೀಟ್ರೂಟ್ ಸೇವನೆ ಮಾಡುವುದರಿಂದ ಅವರು ಅಂದುಕೊಂಡ ಹಾಗೆ ಏನೂ ಆಗುವು ದಿಲ್ಲ. ಇದರಿಂದ ಮಧುಮೇಹಿಗಳಿಗೆ ಸಾಕಷ್ಟು ಪ್ರಯೋಜನಗಳಿವೆ ಎಂದು ಪೌಷ್ಟಿಕ ತಜ್ಞೆ ಲೊವ್ನೀತ್ ಬಾತ್ರಾ ಅವರು ಅಭಿಪ್ರಾಯಪಡುತ್ತಾರೆ.

• ನಿಮಗೆ ಗೊತ್ತಿರಲಿ ಬೀಟ್ರೂಟ್ ನಲ್ಲಿ ನೈಸರ್ಗಿಕವಾಗಿ ಸಿಗುವ ಸಕ್ಕರೆ ಅಂಶ ಹಾಗೂ ಅಧಿಕ ಪ್ರಮಾಣದಲ್ಲಿ ನಾರಿನಾಂಶ ಕೂಡ ಬರುತ್ತದೆ. ಅಷ್ಟೇ ಅಲ್ಲದೆ ಈ ತರಕಾರಿಯಲ್ಲಿ ಪೊಟಾಶಿಯಂ ಮತ್ತು ಫೋಲೆಟ್ ಅಂಶದ ಜೊತೆಗೆ ನೈಸರ್ಗಿಕ ರಾಸಾಯನಿಕ ಅಂಶವಾಗಿರುವ ನೈಟ್ರೇಟ್ ಅಂಶ ಕೂಡ ಯಥೇಚ್ಛವಾಗಿ ಸಿಗುವುದರಿಂದ, ಸಕ್ಕರೆಕಾಯಿಲೆಯನ್ನು ನಿಯಂತ್ರಣ ಮಾಡುವಲ್ಲಿ ಒಂದು ಒಳ್ಳೆಯ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಜೀರ್ಣಾಂಗ ವ್ಯವಸ್ಥೆಗೆ…

• ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿರಬೇಕೆಂದರೆ ನಾವು ಪ್ರತಿದಿನ ಸೇವನೆ ಮಾಡುವ ಆಹಾರದಲ್ಲಿ ಕರಗುವ ನಾರಿನಾಂಶದ ಪ್ರಮಾಣ ಅಧಕ ಪ್ರಮಾಣದಲ್ಲಿ ಇರಬೇಕು. ಇದರಿಂದ ಮಲಬದ್ಧತೆ ಹಾಗೂ ಅಜೀರ್ಣ ಸಮಸ್ಯೆಗಳು ದೂರವಾಗಿ, ಜೀರ್ಣಕ್ರಿಯೆ ಪ್ರಕ್ರಿಯೆ ಸರಾಗವಾಗಿ ನಡೆಯಲು ನೆರವಾಗುತ್ತದೆ. • ಇನ್ನು ಬೀಟ್ರೂಟಿನಲ್ಲಿ ಉತ್ತಮ ಪ್ರಮಾಣದ ಕರಗದ ಮತ್ತು ಕರಗುವ ನಾರಿನಂಶ ಕಂಡು ಬರುವುದ ರಿಂದ ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆಯನ್ನುನಿವಾರಿಸಿ ನಮ್ಮ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲು ಮತ್ತು ಆರೋಗ್ಯಕರವಾಗಿಡಲೂ ಸಹಾಯ ಮಾಡುತ್ತದೆ.