ಮನೆ ಅಪರಾಧ ಪೇಸಿಎಂ ಪೋಸ್ಟರ್ ಅಂಟಿಸಿದ್ದ ಐವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಪೇಸಿಎಂ ಪೋಸ್ಟರ್ ಅಂಟಿಸಿದ್ದ ಐವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ

0

ಬೆಂಗಳೂರು(Bengaluru): ಪೇ ಸಿಎಂ (PAYCM) ಪೋಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಗ್ರೌಂಡ್ಸ್​ ಪೊಲೀಸರು ಐವರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಬಿ.ಆರ್.ನಾಯ್ಡು, ಪವನ್, ಗಗನ್, ಸಂಜಯ್ ಹಾಗೂ ವಿಶ್ವನಾಥ್ ಎಂಬುವರ ಬಂಧಿತರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ನಗರದಲ್ಲಿ ಪೇ ಸಿಎಂ ಶೀರ್ಷಿಕೆಯಡಿ ಸಿಎಂ ಫೋಟೋ ಬಳಸಿ ಪೋಸ್ಟರ್​​ ಅಂಟಿಸಿದ ವಿಚಾರಕ್ಕೆ ನಾಲ್ಕು ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿತ್ತು.

ಈ ಪ್ರಕರಣಗಳ ತನಿಖೆ ನಡೆಸಲು ಸಿಸಿಬಿಗೆ ನಗರದ ಪೊಲೀಸ್​ ಆಯುಕ್ತರು ಸೂಚಿಸಿದ್ದರು.‌ ಬುಧವಾರ ರಾತ್ರಿ ಹೈಗ್ರೌಂಡ್ಸ್ ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಎಂಟು ಜನರನ್ನ ವಶಕ್ಕೆ ಪಡೆದಿದ್ದಾರೆ.‌ ಇದರಲ್ಲಿ ಐವರು ಕಾಂಗ್ರೆಸ್​​ನ ಸಕ್ರಿಯ ಕಾರ್ಯಕರ್ತರು ಎಂದು ಹೇಳಲಾಗುತ್ತಿದೆ‌.