ಮನೆ ಅಪರಾಧ ಮೈಸೂರು: ಪಿಎಫ್’ಐ ಮುಖಂಡ ಮೌಲಾನಾ ಮೊಹಮ್ಮದ್ ಖಲೀಮುಲ್ಲಾ ವಶಕ್ಕೆ

ಮೈಸೂರು: ಪಿಎಫ್’ಐ ಮುಖಂಡ ಮೌಲಾನಾ ಮೊಹಮ್ಮದ್ ಖಲೀಮುಲ್ಲಾ ವಶಕ್ಕೆ

0

ಮೈಸೂರು(Mysuru): ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ‌ ಸಂಸ್ಥೆ (ಎನ್ಐಎ) ಮೈಸೂರಿನಲ್ಲೂ ದಾಳಿ ನಡೆಸಿದ್ದು, ಶಾಂತಿನಗರದ ಪಿಎಫ್ಐ ಮುಖಂಡ ಮೌಲಾನಾ ಮೊಹಮ್ಮದ್ ಖಲೀಮುಲ್ಲಾ‌ ಅವರನ್ನು  ವಶಕ್ಕೆ ಪಡೆದುಕೊಳ್ಳಲಾಗಿದೆ.

ಗುರುವಾರ ಮುಂಜಾನೆ ದಾಳಿ ನಡೆಸಿದ ಎನ್’ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರ ನೆರವಿನಲ್ಲಿ ನಿವಾಸದ ತಪಾಸಣೆ ನಡೆಸಿ, ಖಲೀಮುಲ್ಲಾ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಶಾಂತಿನಗರದ ಖಲೀಮುಲ್ಲಾ ಪಿಎಫ್ಐ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ಇಲ್ಲಿನ ಅಮ್ಮರ್ ಮಸೀದಿಯ ಅಧ್ಯಕ್ಷ ಆಗಿದ್ದರು. ಪಿಎಫ್ಐ ಕಚೇರಿಯಲ್ಲೂ ಎನ್ಐಎ ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿ ಮಹತ್ವದ ದಾಖಲೆ ವಶಕ್ಕೆ ಪಡೆದಿದೆ.