ಮನೆ ದೇವಸ್ಥಾನ ಬೈಲುಕುಪ್ಪೆ ಸುವರ್ಣ ದೇವಾಲಯ

ಬೈಲುಕುಪ್ಪೆ ಸುವರ್ಣ ದೇವಾಲಯ

0

 ‘ಚಿನ್ನದ ದೇವಾಲಯ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ನಾಮ್ಡ್ರೊಲಿಂಗ್ ಬುದ್ಧ ದೇವಾಲಯವು ಭಾರತದ ಅತಿದೊಡ್ಡ ಟಿಬೆಟಿಯನ್ ವಸಾಹತುಗಳಲ್ಲಿ ಒಂದಾಗಿದೆ. ಕೊಡಗು ಜಿಲ್ಲೆಯ ಕುಶಾಲನಗರದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಬೈಲುಕುಪ್ಪೆಯಲ್ಲಿರುವ ಈ ಚಿನ್ನದ ದೇವಾಲಯ ಸಂಕೀರ್ಣವು ಸುಮಾರು 16000 ನಿರಾಶ್ರಿತರು ಮತ್ತು 600 ಸನ್ಯಾಸಿಗಳಿಗೆ ನೆಲೆಯಾಗಿದೆ.

ನಾಮ್ಡ್ರೊಲಿಂಗ್ ದೇವಾಲಯದ ಮುಖ್ಯ ದ್ವಾರವು ಆಕರ್ಷಕ ನಾಲ್ಕು ಅಂತಸ್ತಿನ ಗೋಪುರವಾಗಿದ್ದು, ಬೌದ್ಧಧರ್ಮದ ಸಂಕೇತಗಳನ್ನು ಚಿತ್ರಿಸುವ ಚಕ್ರವನ್ನು ಹೊಂದಿದೆ. ಸುವರ್ಣ ದೇವಾಲಯದ ಒಳಗಿನ ಪ್ರಮುಖ ಆಕರ್ಷಣೆಗಳಳ್ಳಿ ಮಧ್ಯದಲ್ಲಿ ಭಗವಾನ್ ಬುದ್ಧನ ಪ್ರತಿಮೆ ಮತ್ತು ಎರಡೂ ಬದಿಯಲ್ಲಿ ಭಗವಾನ್ ಅಮಿತಾಯ ಮತ್ತು ಭಗವಾನ್ ಪದ್ಮಸಂಭವರ ಪ್ರತಿಮೆಗಳು ಸೇರಿವೆ. ಸಂದರ್ಶಕರು ಪ್ರಾರ್ಥನೆ ಮಾಡಬಹುದು, ಧ್ಯಾನಿಸಬಹುದು, ದಾನ ನೀಡಬಹುದು ಮತ್ತು ಮಣಿ ಪ್ರಾರ್ಥನೆ ಡ್ರಮ್ಗಳನ್ನು ತಿರುಗಿಸಬಹುದು. ಈ ಪ್ರಾರ್ಥನಾ ಡ್ರಮ್ಗಳನ್ನು ತಿರುಗಿಸುವುದರಿಂದ ಬೌದ್ಧ ಪ್ರಾರ್ಥನೆಯಾದ “ಓಂ ಮಣಿ ಪದ್ಮೆ ಹಮ್” ಎಂದು ಜಪಿಸುವುದರಿಂದ ಸಿಗುವ ಪ್ರಯೋಜನ ಸಿಗುತ್ತದೆ ಎಂದು ನಂಬಲಾಗಿದೆ.

ಸಮಯ: ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ  ಸುವರ್ಣ ದೇವಾಲಯ ಪ್ರವಾಸಿಗರಿಗೆ ತೆರೆದಿರುತ್ತದೆ.

ಹತ್ತಿರ: ಅಬ್ಬೆ ಫಾಲ್ಸ್ (38 ಕಿ.ಮೀ), ಚಿಕ್ಲಿಹೊಳೆ ಅಣೆಕಟ್ಟು (19 ಕಿ.ಮೀ), ತಲಕಾವೇರಿ (78 ಕಿ.ಮೀ), ಕಾವೇರಿ ನಿಸರ್ಗಧಾಮ (7 ಕಿ.ಮೀ), ದುಬಾರೆ (20 ಕಿ.ಮೀ)  ಸುವರ್ಣ ದೇವಾಲಯದ ಜೊತೆಗೆ  ಕೊಡಗು ಜಿಲ್ಲೆಯಲ್ಲಿಭೇಟಿಕೊಡಬಹುದಾದ  ಜನಪ್ರಿಯ ಆಕರ್ಷಣೆಗಳಾಗಿವೆ.

ಭೇಟಿ: ಗೋಲ್ಡನ್ ಟೆಂಪಲ್ ಬೆಂಗಳೂರಿನಿಂದ 220 ಕಿ.ಮೀ ಮತ್ತು ಮಂಗಳೂರಿನಿಂದ 172 ಕಿ.ಮೀ ದೂರದಲ್ಲಿದೆ. ಮೈಸೂರು 101 ಕಿ.ಮೀ ದೂರದಲ್ಲಿರುವ ಹತ್ತಿರದ ವಿಮಾನ ನಿಲ್ದಾಣವಾಗಿದೆ. 80 ಕಿ.ಮೀ ದೂರದಲ್ಲಿರುವ ಹಾಸನ ಜಂಕ್ಷನ್ ಹತ್ತಿರದ ರೈಲು ನಿಲ್ದಾಣವಾಗಿದೆ. ಕುಶಾಲ ನಗರ ಬೆಂಗಳೂರು ಮತ್ತು ಮೈಸೂರಿನಿಂದ ಉತ್ತಮ ಬಸ್ ಸೇವೆ ಹೊಂದಿದೆ. ಕುಶಾಲ ನಗರದಿಂದ ಚಿನ್ನದ ದೇವಾಲಯಕ್ಕೆ ಭೇಟಿ ನೀಡಲು ಆಟೋ ಅಥವಾ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.

ವಸತಿ: ಕುಶಾಲ ನಗರದಲ್ಲಿ ಹಲವು ಹೋಂ ಸ್ಟೇಗಳು ಮತ್ತು ರೆಸಾರ್ಟ್ಗಳು ಲಭ್ಯವಿದೆ. ಕೆಎಸ್ಟಿಡಿಸಿಯ ಮಯೂರ ವ್ಯಾಲಿ ವ್ಯೂ ಹೋಟೆಲ್ ಸೇರಿದಂತೆ ಗೋಲ್ಡನ್ ಟೆಂಪಲ್ನಿಂದ 35 ಕಿ.ಮೀ ದೂರದಲ್ಲಿರುವ ಮಡಿಕೇರಿ ನಗರದಲ್ಲಿ ಹೆಚ್ಚಿನ ಆಯ್ಕೆಗಳು ಲಭ್ಯವಿದೆ.