ಮನೆ ಅಪರಾಧ ಪಿಎಫ್’ಐ- ಎಸ್’ಡಿಪಿಐ ಸಂಘಟನೆಯ 7 ಮಂದಿ ಬಂಧನ

ಪಿಎಫ್’ಐ- ಎಸ್’ಡಿಪಿಐ ಸಂಘಟನೆಯ 7 ಮಂದಿ ಬಂಧನ

0

ಬೆಳಗಾವಿ(Belagavi): ಪಿಎಫ್’ಐ ಹಾಗೂ ಎಸ್’ಡಿಪಿಐ ಸಂಘಟನೆಗಳ ಏಳು ಮುಖಂಡರ ವಿರುದ್ಧ ಸಿಆರ್‌ಪಿಸಿ 110 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಮಾರ್ಕೆಟ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

ಆಜಂ ನಗರದ ನಿವಾಸಿ ಪಿಎಫ್‌ಐ ಸಂಘಟನೆಯ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಝಕೀವುಲ್ಲಾ ಫೈಜಿ, ಅಸಾದ್‌ಖಾನ್ ಬಡಾವಣೆ ನಿವಾಸಿ ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬೀದ್ ಖಾನ್ ಕಡೋಲಿ, ಬದ್ರುದ್ದೀನ್ ಪಟೇಲ್, ಶಿವಾಜಿ ನಗರ ನಿವಾಸಿ ಸಲಾವುದ್ದೀನ್ ಖಿಲೆವಾಲೆ, ಅಮನ್ ನಗರ ನಿವಾಸಿ ಸಮೀವುಲ್ಲಾ ಪೀರ್ಜಾದೆ, ಬಾಕ್ಸೈಟ್ ರೋಡ್ ಪ್ರದೇಶದ ನಿವಾಸಿ ಜಹೀರ್ ಘೀವಾಲೆ, ವಿದ್ಯಾಗಿರಿ ನಿವಾಸಿ ರೆಹಾನ್ ಅಜೀಜ್(25) ಬಂಧಿತರು.

ಮಂಗಳವಾ ನಸುಕಿನ ಜಾವ 4 ಗಂಟೆಗೆ ಡಿಸಿಸಿ ರವೀಂದ್ರ ಗಡಾದಿ ನೇತೃತ್ವದಲ್ಲಿ ದಾಳಿ ಮಾಡಿ, ವಶಕ್ಕೆ ಪಡೆಯಲಾಗಿತ್ತು. ಬಂಧಿತರನ್ನು ಮಂಗಳವಾರ ಬೆಳಿಗ್ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಲಾಗಿದೆ.ವೈದ್ಯಕೀಯ ತಪಾಸಣೆ ಬಳಿಕ ಹಿಂಡಲಗಾ ‌ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.