ಮನೆ ರಾಷ್ಟ್ರೀಯ 6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3 ರಂದು ಉಪಚುನಾವಣೆ

6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3 ರಂದು ಉಪಚುನಾವಣೆ

0

ನವದೆಹಲಿ(Newdelhi): ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3 ರಂದು ಉಪಚುನಾವಣೆ ನಡೆಯಲಿದೆ.
ಮಹಾರಾಷ್ಟ್ರ, ಒಡಿಶಾ, ಹರಿಯಾಣ, ತೆಲಂಗಾಣ, ಉತ್ತರ ಪ್ರದೇಶದ ತಲಾ ಒಂದೊಂದು ಮತ್ತು ಬಿಹಾರದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಲಿದೆ. ಉಮೇದುವಾರಿಕೆ ಸಲ್ಲಿಸಲು ಅಕ್ಟೋಬರ್ 14 ಕಡೇ ದಿನವಾಗಿದ್ದು, ಅ.17ರ ಒಳಗಾಗಿ ನಾಮಪತ್ರ ಹಿಂಪಡೆಯಬಹುದು ಎಂದು ಭಾರತೀಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ ವೇಳಾಪಟ್ಟಿಯಲ್ಲಿ ಉಲ್ಲೇಖವಾಗಿದೆ.
ಯಾವ ಕ್ಷೇತ್ರಗಳಿಗೆ ಚುನಾವಣೆ?
ಮಹಾರಾಷ್ಟ್ರ – ಅಂಧೇರಿ ಪೂರ್ವ
ಬಿಹಾರ– ಮೊಕಾಮ ಮತ್ತು ಗೋಪಿಗಂಜ್
ಹರಿಯಾಣ– ಅದಮ್‌ಪುರ
ತೆಲಂಗಾಣ – ಮುನಗೋಡೆ
ಉತ್ತರ ಪ್ರದೇಶ – ಗೋಲಾ ಗೋಕರ್ಣನಾಥ
ಒಡಿಶಾ – ಧಾಮನಗರ (ಎಸ್‌ಸಿ)


ಈ ಚುನಾವಣೆಗಳಿಗೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.
“ಸಾಕಷ್ಟು ಸಂಖ್ಯೆಯ ಇವಿಎಂಗಳು ಮತ್ತು ವಿವಿಪ್ಯಾಟ್ಗಳನ್ನು (ಮತದಾರರ ದೃಢೀಕರಿಸಿದ ಪೇಪರ್ ಆಡಿಟ್ ಟ್ರಯಲ್) ಲಭ್ಯಗೊಳಿಸಲಾಗಿದೆ ಮತ್ತು ಈ ಯಂತ್ರಗಳ ಸಹಾಯದಿಂದ ಚುನಾವಣೆಗಳು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಇಸಿಐ ಕಾರ್ಯದರ್ಶಿ ಸಂಜೀವ್ ಕುಮಾರ್ ಪ್ರಸಾದ್ ಹೇಳಿದ್ದಾರೆ.
ಚುನಾವಣಾ ಆಯೋಗ ಪ್ರಕಾರ, ಮತದಾರರ ಗುರುತಿನ ಪರಿಶೀಲನೆಗಾಗಿ ಚುನಾವಣಾ ಫೋಟೋ ಗುರುತಿನ ಚೀಟಿ ಅಥವಾ ಮತದಾರರ ಕಾರ್ಡ್ ಪ್ರಾಥಮಿಕ ದಾಖಲೆಯಾಗಿದೆ. ಆದಾಗ್ಯೂ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್ನಂತಹ ಇತರ ಅಧಿಕೃತ ಗುರುತಿನ ದಾಖಲೆಗಳನ್ನು ಸಹ ಸ್ವೀಕರಿಸಲಾಗುತ್ತದೆ.