ಮನೆ ಕಾನೂನು ಮೈಸೂರು: ಕೊಲೆ ಯತ್ನ ಆರೋಪಿಗೆ ೨ ವರ್ಷ ೬ ತಿಂಗಳು ಶಿಕ್ಷೆ

ಮೈಸೂರು: ಕೊಲೆ ಯತ್ನ ಆರೋಪಿಗೆ ೨ ವರ್ಷ ೬ ತಿಂಗಳು ಶಿಕ್ಷೆ

0

ಮೈಸೂರು: ದೇವನೂರು ಗ್ರಾಮದ ಡಿ.ಎಸ್.ರಾಕೇಶ್‌ರವರ ಮೇಲೆ ದಿ:೧೦-೦೭-೨೦೨೨ ರಂದು ಸಿ.ಮಹೇಶ್ @ ಜೋಗಿ ಎಂಬುವವರು ಕೊಲೆ ಪ್ರಯತ್ನ ಮಾಡಿರುವ ಹಿನ್ನೆಲೆ ಕವಲಂದೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಮಹೇಂದ್ರ ಬಿ ಅವರು ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಮೈಸೂರಿನ ೭ನೇ ‘ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಎಂ.ರಮೇಶ ರವರು ವಿಚಾರಣೆ ನಡೆಸಿ, ಸಾಕ್ಷಿಗಳನ್ನು ಪರಿಗಣಿಸಿ ಆರೋಪಿತನ ಮೇಲಿನ ಆರೋಪ ದೃಢಪಟ್ಟ ಮೇರೆಗೆ ಆರೋಪಿತನಿಗೆ ಕಲಂ ೩೦೭ ಐಪಿಸಿ ಅಡಿಯಲ್ಲಿ ೨ ವರ್ಷ ಕಠಿಣ ಶಿಕ್ಷೆ ಮತ್ತು ರೂ.೧೦,೦೦೦ ದಂಡ ಹಾಗೂ ಕಲಂ ೫೦೪ ಐಪಿಸಿ ಅಡಿಯಲ್ಲಿ ೬ ತಿಂಗಳ ಸಾದಾ ಸಜೆ ಮತ್ತು ರೂ.೧,೦೦೦ ದಂಡವನ್ನು ವಿಧಿಸಿ ಶಿಕ್ಷೆ ನೀಡಲಾಗಿದ್ದು, ಮೈಸೂರಿನ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆರೋಪಿಯು ಕಾನೂನು ರೀತ್ಯಾ ಪರಿಹಾರ ನೀಡಬೇಕು ಎಂದು ಆದೇಶಿಸಲಾಗಿದೆ ಎಂದು ೭ನೇ ಅಧಿಕ ಸರ್ಕಾರಿ ಆಯೋಜಕರಾದ ಕೆ.ನಾಗರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಮಂಡ್ಯದಲ್ಲಿ ಕುಮಾರಸ್ವಾಮಿ ಸೋಲು ಖಚಿತ: ಸಿದ್ದರಾಮಯ್ಯ
ಮುಂದಿನ ಲೇಖನಕೆಎಸ್ ​ಆರ್​ ಟಿಸಿ ಬಸ್​ ಚಾಲಕರಿಗೆ ಡಬಲ್ ಡ್ಯೂಟಿಯಿಂದ ಮುಕ್ತಿ: ವಿಶ್ರಾಂತಿ ಕಡ್ಡಾಯ