ಮನೆ ರಾಷ್ಟ್ರೀಯ ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕ ಎನ್’ಕೌಂಟರ್: ನಾಲ್ವರು ಉಗ್ರರ ಸಾವು

ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕ ಎನ್’ಕೌಂಟರ್: ನಾಲ್ವರು ಉಗ್ರರ ಸಾವು

0

ಜಮ್ಮು ಕಾಶ್ಮೀರ(Jammu- Kashmir): ಇಲ್ಲಿನ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಎನ್​ಕೌಂಟರ್​ಗಳಲ್ಲಿ ನಿಷೇಧಿತ ಜೆಇಎಂ ಉಗ್ರ ಸಂಘಟನೆ ಜೊತೆ ಸಂಪರ್ಕದಲ್ಲಿದ್ದ ನಾಲ್ವರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.

ಶೋಪಿಯಾನ್ ಜಿಲ್ಲೆಯ ಮೊಲು ಏರಿಯಾದಲ್ಲಿ ಓರ್ವ ಮತ್ತು ಡ್ರಾಚ್ ಏರಿಯಾದಲ್ಲಿ ಮೂವರು ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಬುಧವಾರ ಭದ್ರತಾ ಪಡೆ ಕಾರ್ಯಾಚರಣೆ ಇಳಿದಿತ್ತು. ಈ ವೇಳೆ ಗುಂಡಿನ ಚಕಮಕಿ ನಡೆದು, ಎನ್​ಕೌಂಟರ್​ನಲ್ಲಿ ಉಗ್ರರು ಹತರಾಗಿದ್ದಾರೆ.

ನಿಷೇಧಿತ ಜೆಇಎಂ ಉಗ್ರ ಸಂಘಟನೆಯ ಜೊತೆ ಸಂಪರ್ಕದಲ್ಲಿದ್ದ ಮೂವರು ಸ್ಥಳೀಯ ಉಗ್ರರು ಎನ್​ಕೌಂಟರ್​ನಲ್ಲಿ ಹತರಾಗಿದ್ದಾರೆ ಎಂದು ಎಂದು ಕಾಶ್ಮೀರ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತಪಟ್ಟ ಉಗ್ರದಲ್ಲಿ ಹನಾನ್ ಬಿನ್ ಯಾಕೂಬ್ ಮತ್ತು ಜಮ್ಸೆದ್ ಎಂಬ ಇಬ್ಬರು ಪುಲ್ವಾಮಾದಲ್ಲಿ ಎಸ್​ಪಿಒ ಜಾವೇದ್​ ಮತ್ತು ಪಶ್ಚಿಮ ಬಂಗಾಳ ಕಾರ್ಮಿಕನ ಹತ್ಯೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.