ಮನೆ ರಾಷ್ಟ್ರೀಯ ಮುಂಬೈನಲ್ಲಿ ಭೀಕರ ರಸ್ತೆ ಅಪಘಾತ: 5 ಮಂದಿ ಸಾವು

ಮುಂಬೈನಲ್ಲಿ ಭೀಕರ ರಸ್ತೆ ಅಪಘಾತ: 5 ಮಂದಿ ಸಾವು

0

ಮುಂಬೈ(Mumbai): ಬಾಂದ್ರಾ ವರ್ಲಿ ಸೀಲಿಂಕ್‌ ಬಳಿ ಸಂಭವಿಸದ ಭೀಕರ ರಸ್ತೆ ಅಪಘಾತದಲ್ಲಿ 5 ಜನ ಸಾವನ್ನಪ್ಪಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ನಾಯರ್ ಮತ್ತು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು ಮತ್ತು ಗಾಯಗೊಂಡವರ ವಿವರ ಇನ್ನೂ ಲಭ್ಯವಾಗಿಲ್ಲ.

ಮಾಹಿತಿಯ ಪ್ರಕಾರ, ಮುಂಜಾನೆ 3.30ರ ಸುಮಾರಿಗೆ ಕಾರು ಮತ್ತು ಆಂಬ್ಯುಲೆನ್ಸ್​ ನಡುವೆ ಅಪಘಾತ ಸಂಭವಿಸಿದೆ. ಬಳಿಕ ಅಪಘಾತಕ್ಕೊಳಗಾದ ಕಾರು ಮತ್ತು ಆಂಬ್ಯುಲೆನ್ಸ್’ಗೆ ಇನ್ನೂ ಮೂರು ಕಾರುಗಳು ಡಿಕ್ಕಿ ಹೊಡೆದಿವೆ.

ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.