ಮಂಡ್ಯ (Mandya): ಹಲವು ಬೇಡಿಕೆಗಳ ಈಡೇ ರಿಕೆಗೆ ಆಗ್ರಹಿಸಿ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ರೈತಸಂಘ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ದಸರೆಗೆ ಆಗಮಿಸುವ ಪ್ರವಾಸಿಗರು ಪರದಾಟುವಂತಾಗಿದೆ.
ಬೆಂಗಳೂ ರು -ಮೈಸೂ ರು , ಕುಣಿಗಲ್-ಮೈಸೂ ರು ರಸ್ತೆ ಬಂದ್ ಮಾಡಿ ವಿವಿಧೆಡೆ ರೈತ ಸಂಘ ಪ್ರತಿಭಟನೆ ನಡೆಸುತ್ತಿದ್ದು , ಮಂಡ್ಯ ನಗರದ ವಿ.ಸಿ.ಫಾರ್ಮ್ ಗೇ ಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿ ಟನ್ ಕಬ್ಬಿಗೆ 4,500 ರೂ . ನಿಗದಿ ಮಾಡಬೇ ಕು ಎಂ ದು ರೈತ ಸಂಘ ಮನವಿ ಮಾಡಿತ್ತು. ದಸರಾ ಹಬ್ಬದೊಳಗೆ ದರ ಘೋಷಣೆಗೆ ಸರ್ಕಾ ರಕ್ಕೆ ಗಡುವು ನೀ ಡಿತ್ತು. ಬೇ ಡಿಕೆಗೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಹಸು , ಕುರಿ, ಎತ್ತಿನಗಾಡಿ, ಟ್ರ್ಯಾಕ್ಟರ್ ಗಳೊಂದಿಗೆ ರಸ್ತೆಯಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿ.ಸಿ.ಫಾ ರ್ಮ್ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಡಿವೈ ಎಸ್’ಪಿ ಶಿವಮೂ ರ್ತಿ ನೇತೃತ್ವದಲ್ಲಿ ಪೊ ಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದಿದ್ದರೆ, ಸ್ಥಳದಲ್ಲಿದ್ದ ಇನ್ನಷ್ಟು ರೈತರ ಗುಂಪನ್ನು ಚದುರಿಸಿ ವಾಹನಗಳ ಸಂಚಾರ ಅನುವು ಮಾಡಿಕೊಟ್ಟಿದ್ದಾರೆ. ಈ ವೇ ಳೆ ಆಕ್ರೋಶ ಹೊರ ಹಾಕಿದ ರೈತರು , ಲಂಚ ಪಡೆಯುವ ಜನಪ್ರತಿನಿಧಿಗಳು ಮತ್ತು ಸಂಬಳ ಪಡೆಯುವ ಅಧಿಕಾರಿಗಳಿಗೆ ರೈತರ ಕಷ್ಟ ಅರ್ಥವಾಗುತ್ತಿಲ್ಲ. ರೈತರ ಪರ ಯಾವ ಪಕ್ಷವೂ ಪಕ್ಷವೂ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು .
ಬೆಂಗಳೂರು ಮತ್ತು ಕುಣಿಗಲ್ ಕಡೆಯಿಂದ ಬರುವ ವಾಹನಗಳಿಗೆ ಸಂಪರ್ಕ ಕಲ್ಪಿಸುವ ವೃತ್ತದಲ್ಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಂಡ್ಯದ ವಿ.ಸಿ.ಫಾರಂ, ಮದ್ದೂರು ಅಡಿಗಾಸ್ ಹೋಟೆಲ್, ಮಳವಳ್ಳಿಯ ಅಂಚೆ ದೊಡ್ಡಿ ಗೇಟ್, ನರಸೀಪುರದ ಎಡತೊರೆ, ಮೈಸೂರಿನ ಇಲವಾಲ, ನಂಜಗೂಡಿನ ಕಬಿನಿ ಸೇತುವೆ, ಶ್ರೀರಂಗಪಟ್ಟಣದ ಕಿರಂಗೂರು ವೃತ್ತ, ಕೆ.ಆರ್ ಪೇಟೆಯ ವೃತ್ತದಲ್ಲೂ ರೈತ ಸಂಘದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಬ್ಬಿಗೆ ಬೆಲೆ ನಿಗದಿ ಜತೆಗೆ, ಕೆಆರ್ ಎಸ್ ಸುತ್ತಮುತ್ತ ಗಣಿಗಾರಿಕೆ ನಿಷೇಧ, ವಿದ್ಯುತ್ ತಿದ್ದುಪಡಿ ಕಾಯಿದೆ ಕೈಬಿಡುವುದು ಸೇರಿದಂತೆ 18 ಬೇಡಿಕೆಗಳ ಈಡೇರಿಕೆಗೆ ರೈತರು ಆಗ್ರಹಿಸಿದ್ದಾರೆ.