ಮನೆ ಸುದ್ದಿ ಜಾಲ ದಸರಾ: ಜಂಬೂ ಸವಾರಿಯಲ್ಲಿ ಗಮನಸೆಳೆಯಲಿರುವ ಅಪ್ಪು ಸ್ತಬ್ಧಚಿತ್ರ

ದಸರಾ: ಜಂಬೂ ಸವಾರಿಯಲ್ಲಿ ಗಮನಸೆಳೆಯಲಿರುವ ಅಪ್ಪು ಸ್ತಬ್ಧಚಿತ್ರ

0

ಚಾಮರಾಜನಗರ(Chamarajanagara): ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ.

ಜಂಬೂ ಸವಾರಿಯಲ್ಲಿ ಸಾಗುವ ಸ್ತಬ್ಧ ಚಿತ್ರಗಳಲ್ಲಿ ಗಡಿ ಜಿಲ್ಲೆ ಚಾಮರಾಜನಗರದ ಅಪ್ಪು ಸ್ತಬ್ಧಚಿತ್ರ ಜನರ ಗಮನ ಸೆಳೆಯಲಿದೆ.

ಚಾಮರಾಜನಗರ ರಾಯಭಾರಿ ಆಗಿದ್ದ ಹಾಗೂ ಚಾಮರಾಜನಗರದ ತವರಿನ ನಂಟು ಹೊಂದಿದ್ದ ದಿವಂಗತ ನಟ ಪುನೀತ್ ರಾಜ್​ಕುಮಾರ್ ಅವರಿಗೆ ಸ್ತಬ್ಧ ಚಿತ್ರದ ಮೂಲಕ ಗೌರವ ಸಲ್ಲಿಸಲು ಚಾಮರಾಜನಗರ ಜಿಲ್ಲಾ ಪಂಚಾಯತ್‌ ಮುಂದಾಗಿದೆ.

ಹನೂರಿನ‌ ಕಲಾವಿದ ಮಹಾದೇವ್ ಎಂಬುವರೊಟ್ಟಿಗೆ 15 ಜನರ ತಂಡ ಈ ಸ್ತಬ್ಧ ಚಿತ್ರ ತಯಾರಿಸಿದ್ದಾರೆ. “ಪ್ರಕೃತಿ ಮಡಿಲಿನ ಹುಲಿ ಮತ್ತು ಆನೆ ಅರಣ್ಯಧಾಮ” ಎಂದು ಸ್ತಬ್ಧ ಚಿತ್ರಕ್ಕೆ ಹೆಸರಿಡಲಾಗಿದೆ. ಜಿಲ್ಲೆಯ ಪ್ರಕೃತಿ, ವನ್ಯಜೀವಿ ಸಂಪತ್ತು, ಪವಾಡ ಪುರುಷ ಮಲೆ ಮಹದೇಶ್ವರ ಸ್ವಾಮಿಯನ್ನು ಸ್ತಬ್ಧ ಚಿತ್ರದಲ್ಲಿ ಬಿಂಬಿಸಲಾಗಿದೆ..‌

ಸ್ತಬ್ಧಚಿತ್ರದ ಮುಂಭಾಗ ದೊಡ್ಡ ಹುಲಿಯ ಮುಖ ಇದೆ. ಹಸಿರು ಆವರಿಸಿರುವ ಬೆಟ್ಟ, ಆನೆ ಸೇರಿದಂತೆ ಇತರೆ ಪ್ರಾಣಿಗಳು, ಮಧ್ಯದಲ್ಲಿ ಹುಲಿಯ ಮೇಲೆ ಕುಳಿತಿರುವ ಮಲೆ ಮಹದೇಶ್ವರ ಸ್ವಾಮಿಯ ಪ್ರತಿಕೃತಿ ಹಾಗೂ ಹಿಂಭಾಗದಲ್ಲಿ ಮಂದಸ್ಮಿತ ಪುನೀತ್‌ರಾಜ್‌ಕುಮಾರ್‌ ಅವರ ದೊಡ್ಡ ಪ್ರತಿಕೃತಿ ಅಳವಡಿಸಲಾಗಿದೆ.‌

ಹಿಂದಿನ ಲೇಖನರೈತಸಂಘದಿಂದ ಹೆದ್ದಾರಿ ಬಂದ್: ದಸರಾ ಪ್ರವಾಸಿಗರ ಪರದಾಟ
ಮುಂದಿನ ಲೇಖನಬಣ್ಣ ಬಣ್ಣದ ಚಿತ್ತಾರದಲ್ಲಿ ಕಂಗೊಳಿಸುತ್ತಿರುವ ದಸರಾ ಗಜಪಡೆ