ಮನೆ ಅಪರಾಧ ಕಾರು ಅಡ್ಡಗಟ್ಟಿ ದರೋಡೆ: 2.11 ಕೋಟಿ ರೂ. ದೋಚಿದ  ಆಗಂತುಕರು

ಕಾರು ಅಡ್ಡಗಟ್ಟಿ ದರೋಡೆ: 2.11 ಕೋಟಿ ರೂ. ದೋಚಿದ  ಆಗಂತುಕರು

0

ಉತ್ತರ ಕನ್ನಡ(Uttarakannada): ಯಲ್ಲಾಪುರ ತಾಲೂಕಿನ ಅರೆಬೈಲ್ ಘಾಟಿನಲ್ಲಿ ಕಾರಲ್ಲಿ ತೆರಳುತ್ತಿದ್ದವರನ್ನುಅಡ್ಡಗಟ್ಟಿ ಬರೊಬ್ಬರಿ 2.11 ಕೋಟಿ ರೂ ಹಣವನ್ನು ದರೋಡೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜೊತೆಗೆ ಕಾರನ್ನೂ ಬಿಡದೇ ರಾಬರಿ ಮಾಡಿದ್ದಾರೆ ಆಗಂತುಕರು. ಈ ಪ್ರಕರಣವೀಗ ಇಡೀ ಯಲ್ಲಾಪುರದ ಮಂದಿಯ ನಿದ್ದೆಗೆಡಿಸಿದೆ.

ಘಟನೆ ವಿವರ: ಅಕ್ಟೋಬರ್ ಒಂದನೇ ತಾರೀಖಿನ ಶನಿವಾರ ರಾತ್ರಿ ಘಾಟ್ ಸೆಕ್ಷನ್ನಿನ ನಿರ್ಜನ ಪ್ರದೇಶದಲ್ಲಿ ನಡೆದ ಘಟನೆ ಇದು. ಬೆಳಗಾವಿಯಿಂದ ಯಲ್ಲಾಪುರ ಮಾರ್ಗವಾಗಿ ಕೇರಳಕ್ಕೆ ಚಿನ್ನ ಖರೀದಿಗಾಗಿ ಹೊರಟಿದ್ದವರನ್ನು ಅನಾಮತ್ತಾಗಿ ಅಡ್ಡಗಟ್ಟಿ ದೋಚಲಾಗಿದೆ. ಚಿನ್ನ ಖರೀದಿಗಾಗಿ ಸ್ವಿಪ್ಟ್ ಕಾರಲ್ಲಿ ತೆರಳುತ್ತಿದ್ದ ಬೆಳಗಾವಿಯ ಆ ಇಬ್ಬರೂ ಯಲ್ಲಾಪುರದ ಅರೆಬೈಲ್ ಘಾಟಿನಲ್ಲಿ ಬರುತ್ತಿದ್ದಂತೆ, ಥೇಟು ಸಿನಿಮಾ ಸ್ಟೈಲಿನಲ್ಲೇ ಎರಡು ಕಾರುಗಳಲ್ಲಿ ಬಂದು ಅಡ್ಡ ಹಾಕಿದ್ದಾರೆ ಖದೀಮರು. ತಕ್ಷಣವೇ ಆರೇಳು ಜನ ದರೋಡೆಕೋರರ ತಂಡ ಏಕಾಏಕಿ ಕಾರಲ್ಲಿದ್ದವರನ್ನು ಹೊರಗೆಳೆದು ಹಲ್ಲೆ ಮಾಡಿದೆ.

ಹೀಗಾಗಿ, ಅಕ್ಷರಶಃ ದರೋಡೆಕೋರರ ದಾಳಿಗೆ ಪ್ರಯಾಣಿಕರು ನಡುಗಿದ್ದಾರೆ. ಹೀಗಾಗಿ, ಬದುಕಿದರೆ ಸಾಕು ಅಂತಾ ಶರಣಾಗಿದ್ದಾರೆ. ಹೀಗಾಗಿ, ತಕ್ಷಣವೇ ಕಾರಿನ ಕಾರಲ್ಲಿದ್ದ ಬರೋಬ್ಬರಿ 2.11 ಕೋಟಿ ರೂ. ಹಣ, ಕಾರು ಸಮೇತ ಎಗರಿಸಿ ಪರಾರಿಯಾಗಿದ್ದಾರಂತೆ. ಜೊತೆಗೆ ಆ ಇಬ್ಬರ ಮೊಬೈಲ್ ಪೋನ್ ಗಳನ್ನೂ ಕೂಡ ಬಿಡದೇ ದೋಚಿದ್ದಾರೆ.

ಹೀಗಾಗಿ ಆ ಇಬ್ಬರೂ ಮಂಗಳವಾರ ಅಂದರೆ ಆಯುಧ ಪೂಜೆಯ ದಿನ ಯಲ್ಲಾಪುರ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ.