ಮನೆ ಅಪರಾಧ ಜೆಎಸ್‍’ಎಸ್ ಮಹಿಳಾ ಕಾಲೇಜಿನ ಉಪನ್ಯಾಸಕಿ ಆತ್ಮಹತ್ಯೆ

ಜೆಎಸ್‍’ಎಸ್ ಮಹಿಳಾ ಕಾಲೇಜಿನ ಉಪನ್ಯಾಸಕಿ ಆತ್ಮಹತ್ಯೆ

0

ಚಾಮರಾಜನಗರ(Chamrajanagar): ನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ಉಪನ್ಯಾಸಕಿಯೊಬ್ಬರು ಆಕೆಯ ಹುಟ್ಟುಹಬ್ಬದಂದೇ ಕಾಲೇಜಿನ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪದವಿ ಕಾಲೇಜಿನಲ್ಲಿ ಜೀವ ವಿಜ್ಞಾನ ವಿಷಯ ಬೋಧನೆ ಮಾಡುತ್ತಿದ್ದ ಚಂದನಾ (26) ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ.

ಯಳಂದೂರು ತಾಲ್ಲೂಕಿನ ಅಂಬಳೆಯವರಾಗಿದ್ದ ಚಂದನಾ ಅವರ ಹುಟ್ಟುಹಬ್ಬ ಮಂಗಳವಾರವೇ ಇತ್ತು. ಜೆಎಸ್‌ಎಸ್‌ ಕಾಲೇಜಿನಲ್ಲೇ ಓದಿದ್ದ ಅವರು, ಅಲ್ಲಿಯೇ ಉಪನ್ಯಾಸಕರಾಗಿ ನೇಮಕಗೊಂಡಿದ್ದರು. ಕಾಲೇಜಿನ ಹಾಸ್ಟೆಲ್‌ನಲ್ಲೇ ಉಳಿದುಕೊಂಡಿದ್ದರು.

ಮಂಗಳವಾರ ಬೆಳಿಗ್ಗೆ 10.30–11 ಗಂಟೆಯ ಅವಧಿಯಲ್ಲಿ ಕೊಠಡಿಯ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

11.30ರ ಹೊತ್ತಿಗೆ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ.‘ಸಾಯುವುದಕ್ಕೂ ಮೊದಲೂ ಪತ್ರ ಬರೆದಿದ್ದಾರೆ.

ಅದರಲ್ಲಿ, ‘ನನ್ನ ಸಾವಿಗೆ ನಾನೇ ಕಾರಣ. ಒತ್ತಡದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಬರೆದಿದ್ದಾರೆ’ ಎಂದು ಪಟ್ಟಣ ಠಾಣೆ ಇನ್‌ಸ್ಪೆಕ್ಟರ್‌ ತಿಮ್ಮರಾಜು ತಿಳಿಸಿದರು.

ಚಂದನಾ ತಂದೆ ನೀಡಿರುವ ದೂರಿನ ಆಧಾರದಲ್ಲಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಭೃಗು ಮಹರ್ಷಿಗಳು ಪ್ರತಿಷ್ಠಾಪಿಸಿದ ಮಂಗಳ ಮೂರ್ತಿ ವೆಂಕಟೇಶನ ಸನ್ನಿಧಿ
ಮುಂದಿನ ಲೇಖನತೊಂದರೆ ಇರುವುದು ನಿಮ್ಮಲ್ಲಿಯೇ, ಬೇರೆಲ್ಲೂ ಅಲ್ಲ!