ಮನೆ ಅಂತಾರಾಷ್ಟ್ರೀಯ ಕ್ಯಾಲಿಫೋರ್ನಿಯಾ: ಅಪಹರಣವಾಗಿದ್ದ ಒಂದೇ ಕುಟುಂಬದ ನಾಲ್ವರ ಶವ ಪತ್ತೆ

ಕ್ಯಾಲಿಫೋರ್ನಿಯಾ: ಅಪಹರಣವಾಗಿದ್ದ ಒಂದೇ ಕುಟುಂಬದ ನಾಲ್ವರ ಶವ ಪತ್ತೆ

0

ನ್ಯೂಯಾರ್ಕ್(New York) : ಅಮೆರಿಕದ ಕ್ಯಾಲಿಫೋರ್ನಿಯಾದ ಮರ್ಸಿಡ್ ನಗರದಲ್ಲಿ ಅಪಹರಿಸಲಾಗಿದ್ದ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮರ್ಸಿಡ್ ಕೌಂಟಿಯ ತೋಟವೊಂದರಲ್ಲಿ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ಜಶ್‌ದೀಪ್ ಸಿಂಗ್(36), ಅವರ ಪತ್ನಿ ಜಸ್ಲೀನ್ ಕೌರ್(27), ಅವರ 8 ತಿಂಗಳ ಮಗು ಅರೂಹಿ ಧೇರಿ ಮತ್ತು ಮಗುವಿನ ಸೋದರ ಮಾವ ಅಮನ್‌ದೀಪ್ ಸಿಂಗ್(39) ಎಂದು ಗುರುತಿಸಲಾಗಿದೆ.

ಸ್ಯಾನ್ ಫ್ರಾನ್ಸಿಸ್ಕೊದ ಆಗ್ನೇಯದಲ್ಲಿರುವ ಸ್ಯಾನ್ ಜೋಕ್ವಿನ್ ವ್ಯಾಲಿಯಲ್ಲಿರುವ ಮರ್ಸಿಡ್‌ನಲ್ಲಿ ಸೋಮವಾರ 8 ತಿಂಗಳ ಮಗು ಅರೂಹಿ ಧೇರಿ, ಆಕೆಯ ಪೋಷಕರು ಮತ್ತು ಚಿಕ್ಕಪ್ಪನನ್ನು ಅವರ ಉದ್ಯಮದ ಸ್ಥಳದಿಂದ ಅಪಹರಿಸಲಾಗಿತ್ತು.

ಅಪಹರಣ ಮಾಡಿದ್ದ ವ್ಯಕ್ತಿಯ ಕಣ್ಗಾವಲು ವಿಡಿಯೊವನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದರು. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿರಬಹುದು ಎಂದು ಅಧಿಕಾರಿಗಳು ಅನುಮಾನಿಸಿದ್ದಾರೆ.