ಮನೆ ಮನರಂಜನೆ ಬಾಲಿವುಡ್ ಹಿರಿಯ ನಟ ಅರುಣ್ ಬಾಲಿ ನಿಧನ

ಬಾಲಿವುಡ್ ಹಿರಿಯ ನಟ ಅರುಣ್ ಬಾಲಿ ನಿಧನ

0

ಮುಂಬೈ(Mumbai): ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಿವುಡ್ ನ ಹಿರಿಯ ನಟ ಅರುಣ್ ಬಾಲಿ(79) ಶುಕ್ರವಾರ ಮುಂಬೈನಲ್ಲಿ ನಿಧನರಾಗಿದ್ದಾರೆ.

ಅಪರೂಪದ ಮೈಸ್ತೇನಿಯಾ ಗ್ರ್ಯಾವಿಸ್‌ ಎಂಬ ನರ ಸಂಬಂಧಿ ಕಾಯಿಲೆಗೆಯಿಂದ ನಟ ಬಳಲುತ್ತಿದ್ದರು. ಅಲ್ಲದೇ ಅವರು ಈ ವರ್ಷದ ಆರಂಭದಲ್ಲಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದರು.

ತಮ್ಮ ತಂದೆ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದರು. ಆದರೆ, ಇಂದು ಮುಂಜಾನೆ 4.30 ರ ಸುಮಾರಿಗೆ ನಿಧನರಾದರು ಎಂದು ಅಂಕುಶ್ ಹೇಳಿದರು.

ಸಿನಿಮಾ ಮತ್ತು ಟಿ.ವಿ ಕಾರ್ಯಕ್ರಮಗಳ ಮೂಲಕ ಅವರು ಜನಪ್ರಿಯರಾಗಿದ್ದರು. 1991 ರಲ್ಲಿ ಅಕ್ಷಯ್ ಕುಮಾರ್ ಅವರ ‘ಸೌಗಂಧ್‘ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಬಳಿಕ, ರಾಜು ಬನ್ ಗಯಾ ಜಂಟಲ್‌ಮ್ಯಾನ್, ಸಬ್ಸೆ ಬಡಾ ಕಿಲಾಡಿ, ಸತ್ಯ, 3 ಈಡಿಯಟ್ಸ್, ರೆಡಿ, ಬರ್ಫಿ!, ಪಿಕೆ, ಬಾಘಿ, ಕೇದಾರನಾಥ್, ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.ಪಾಣಿಪತ್, ಸಾಮ್ರಾಟ್ ಪೃಥ್ವಿರಾಜ್ ಮತ್ತು ಲಾಲ್ ಸಿಂಗ್ ಚಡ್ಡಾ ಮುಂತಾದ ಇತ್ತೀಚಿನ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದರು.

ಇಂದು ತೆರೆ ಕಂಡಿರುವ ಅಮಿತಾಬ್ ಬಚ್ಚನ್-ರಶ್ಮಿಕಾ ಮಂದಣ್ಣ ಅಭಿನಯದ ‘ಗುಡ್ ಬೈ’ ಅವರು ಅಭಿನಯದ ಕೊನೆಯ ಚಿತ್ರವಾಗಿದೆ.