ಗುಂಡ್ಲುಪೇಟೆ(Gundlupete): ಮೈಸೂರು ಮೂಲದ ಪ್ರೇಮಿಗಳಿಬ್ಬರು ತಮ್ಮ ಪ್ರೇಮ ಪ್ರಕರಣ ಬಯಲಿಗೆ ಬಂದ ಹಿನ್ನೆಲೆ ಪಟ್ಟಣಕ್ಕೆ ಧಾವಿಸಿ ಮಿಸ್ಟ್ರಿ ರಾಕ್ ಲಾಡ್ಜ್’ನಲ್ಲಿ ಆತ್ಮಹತ್ಯೆಗೆಯತ್ನಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಮೈಸೂರು ಮೂಲದ ಮಹಿಳೆಯು ತಮ್ಮದೇ ಕ್ಯಾಟರಿಂಗ್ ನಲ್ಲಿ ಕೆಲಸಮಾಡುತ್ತಿದ್ದ ನಂಜನಗೂಡು ಮೂಲದ ಯುವಕ ಜೊತೆ ಸಂಬಂಧ ಹೊಂದಿದ್ದರು. ಇಬ್ಬರು ನೆನ್ನೆ (ಶುಕ್ರವಾರ) ಬೆಳಗ್ಗೆ 11.30 ರ ವೇಳೆ ರೂಮ್ ಪಡೆದಿದ್ದರು. ಬಳಿಕ ರಾತ್ರಿ ಸಾವಿಗೆ ಯತ್ನಿಸಿದ್ದಾರೆ.
ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಧಾವಿಸಿ ಅಸ್ವಸ್ಥಗೊಂಡಿದ್ದ ಇಬ್ಬರನ್ನು ಕೆ ಆರ್ ಅಸ್ಪತ್ರೆ ಗೆ ಮತ್ತು ಜೆಎಸ್ಎಸ್ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಸದ್ಯ ಇಬ್ಬರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.