ಮನೆ ರಾಜ್ಯ ನಂಜನಗೂಡು: ಅಂಗನವಾಡಿಗೆ ಹುಳು ಹಿಡಿದ ಆಹಾರ ಸರಬರಾಜು

ನಂಜನಗೂಡು: ಅಂಗನವಾಡಿಗೆ ಹುಳು ಹಿಡಿದ ಆಹಾರ ಸರಬರಾಜು

0

ನಂಜನಗೂಡು(Nanjangud): ತಾಲ್ಲೂಕಿನ ಹೆಡಿಯಾಲದ ಅಂಗನವಾಡಿಗೆ ಹುಳು ಹಿಡಿದ ಆಹಾರದ ಪೊಟ್ಟಣಗಳನ್ನು ಸರಬರಾಜು ಮಾಡುತ್ತಿರುವುದು ಕಂಡು ಬಂದಿದೆ.

ಕಳೆದ ವರ್ಷವೂ ಇದೇ ರೀತಿ ಹುಳುಹಿಡಿದ ಆಹಾರ ಪದಾರ್ಥಗಳು ಸರಬರಾಜಾಗಿದ್ದ ಹಿನ್ನಲೆಯಲ್ಲಿ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುತ್ತಿದ್ದ ಎಂಎಸ್‌ಪಿಸಿ ಏಜೆನ್ಸಿಯನ್ನು ರದ್ದು ಮಾಡಿ ಬೇರೆ ಕಡೆಯಿಂದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲಾಗುತ್ತಿತ್ತು.
ಸಂಸ್ಥೆಯ ವಿರುದ್ಧ ಕೇಂದ್ರ ಅಹಾರ ಸಂಶೋಧನಾಯದ ಅಧಿಕಾರಿಗಳು ದಾಳಿ ನಡೆಸಿ, ನೀಡಿದ ವರದಿಯ ಮೇಲೆ ಈ ಸಂಸ್ಥೆಯ ಆಹಾರ ಪೂರೈಕೆಯ ಪರವಾನಗಿಯನ್ನು ರದ್ದು ಮಾಡಲಾಗಿತ್ತು.
ಆದರೆ, ಈ ವರದಿಗೆ ಮೂರೇ ತಿಂಗಳಲ್ಲಿ ಧೂಳು ಹಿಡಿಸಿ ತಾಲ್ಲೂಕಿನ ಅಂಗನವಾಡಿಗಳಿಗೆ ಅಹಾರ ಪೂರೈಸುವ ಪರವಾನಗಿಯನ್ನು ಎಂಎಸ್‌ಪಿಸಿ ಪಡೆಯಲು ಯಶಸ್ವಿಯಾಗಿತ್ತು.
ಈಗ ಮತ್ತೆ ತಾಲೂಕಿನ ಅಂಗನವಾಡಿಗಳಿಗೆ ಹುಳು ಹಿಡಿದ ಅಹಾರ ಪದಾರ್ಥಗಳು ಸರಬರಾಜಾಗುತ್ತಿರುವುದು ಬಹಿರಂಗವಾಗಿದ್ದು, ಸರ್ಕಾರ ಹಾಗೂ ಇಲಾಖೆಯ ಅಧಿಕಾರಿಗಳು ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.